ಮಡಿಕೇರಿ, ಫೆ. 23: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ.ಪಿ. ಬಾಣೆಯ ಇಕೋ ಕ್ಲಬ್ ವತಿಯಿಂದ ಹೊರಸಂಚಾರ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳನ್ನು ಮಡಿಕೇರಿಯ ರಾಜಾಸೀಟಿನಲ್ಲಿ ನಡೆದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮಕ್ಕೆ ಹಾಗೂ ಮಡಿಕೇರಿ ಕೋಟೆ ವೀಕ್ಷಣೆಗಾಗಿ ಕರೆದುಕೊಂಡು ಹೋಗಲಾಗಿದ್ದು, ಮಕ್ಕಳು ಸಂತೋಷದಿಂದ ವೀಕ್ಷಿಸಿ ಆನಂದಿಸಿದರು.