ಭಾಗಮಂಡಲ, ಫೆ. 22: ಸಾವಯವ ಉತ್ಪನ್ನಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿಂiÀiನ್ನು ಪಡೆಯಬಹುದು ಎಂದು ಕೃಷಿಕ ಪುರುಷೋತ್ತಮ ಹೇಳಿದರು. ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ನವ ಭಾರತ್ ರಸಗೊಬ್ಬರ ಕಂಪೆನಿ ವತಿಯಿಂದ ಏರ್ಪಡಿಸಲಾಗಿದ್ದ ಸಾವಯವ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೃಷಿಕರು ರಾಸಾಯನಿಕ ಗೊಬ್ಬರ ಬಳಸುವುದರಿಂದ ಮಣ್ಣಿನ ಫಲವತ್ತತೆ ಕಳೆದು ಹೋಗುತ್ತಿದೆ. ರಾಸಾಯನಿಕ ಉತ್ಪನ್ನಗಳನ್ನು ಬಳಸಿ ಉತ್ಪಾದಿಸುವ ವಿಷಯುಕ್ತ ಬೆಳೆಗಳಿಂದ ಮನುಷ್ಯ ಹಾಗೂ ಪ್ರಾಣಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಣ್ಣು ಫಲವತ್ತತೆಯನ್ನು ಕಳೆದುಕೊಂಡರೆ ಭೂಮಿ ಬರಡಾಗುತ್ತದೆ. ಕೃಷಿಕರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಗೊಬ್ಬರ ಹಾಗೂ ಪೋಷಕಾಂಶಯುಕ್ತ ಗೊಬ್ಬರ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಕಂಪೆನಿಯ ಕೃಷಿ ಅಧಿಕಾರಿಗಳಾದ ದರ್ಶನ್, ಕುಮಾರಸ್ವಾಮಿ, ದಯಾನಂದ ಹಾಗೂ ಗ್ರಾಮದ ರೈತರು ಪಾಲ್ಗೊಂಡಿದ್ದರು.