ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಪೆÇನ್ನಂಪೇಟೆ, ಫೆ. 22: ಬಿಟ್ಟಂಗಾಲ ಸಮೀಪದ ವಿ.ಬಾಡಗದಲ್ಲಿ ಹುಲಿ ಹೆಜ್ಜೆ ಗುರುತು ಕಂಡು ಬಂದಿದೆ. ಇದರಿಂದ ವಿ.ಬಾಡಗದ ಆಸುಪಾಸಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ವಿ.ಬಾಡಗದ ವಗ್ಗೆ ಎಂಬಲ್ಲಿರುವ ಕುಪ್ಪಂಡ ದಿಲನ್ ಬೋಪಣ್ಣ ಅವರಿಗೆ ಸೇರಿದ ಕಾಫಿ ತೋಟದ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಇದರಿಂದ ಶುಕ್ರವಾರ ರಾತ್ರಿ ವೇಳೆ ಹುಲಿಯೊಂದು ಇತ್ತ ಸುಳಿದಾಡಿರುವುದು ದೃಢಪಟ್ಟಿದೆ.

ಇದೀಗ ಬೆಳೆಗಾರರ ಕಾಫಿ ಕೆಲಸ ಅಂತಿಮ ಹಂತದಲ್ಲಿದ್ದು, ಸ್ಪಿಂಕ್ಲರ್ ಕೆಲಸ ಈ ಭಾಗದಲ್ಲಿ ಭರದಿಂದ ನಡೆಯುತ್ತಿದೆ. ಈ ನಡುವೆ ಗ್ರಾಮದಲ್ಲಿ ಹುಲಿಯೊಂದು ಸಂಚರಿಸಿರುವುದು ಕಾಫಿ ತೋಟದ ಮಾಲೀಕರಲ್ಲಿ ಮತ್ತು ಕಾರ್ಮಿಕರಲ್ಲಿ ಆತಂಕ ಸೃಷ್ಟಿಸಿದೆ.