ವೀರಾಜಪೇಟೆ, ಫೆ. 20: ವೀರಾಜಪೇಟೆಯ ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತಿನ ಹದಿನೈದನೇ ಕಾರ್ಯಕ್ರಮ ಸಿದ್ದಾಪುರದ ಇಕ್ರಾ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸ ಲಾಗಿದ್ದ ಕಾವ್ಯಗೋಷ್ಠಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ವ.ಕ. ಲೋಕೇಶ್, ಕಾವ್ಯವಾಚನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಬೇಕೆಂದು ಹೇಳಿದರು.
ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತಿನ ಸಂಚಾಲಕ ಪಿ.ಎಸ್. ವೈಲೇಶ್ ಆಶಯ ನುಡಿಗಳನ್ನಾಡಿದರು. ಅಧ್ಯಕ್ಷತೆಯನ್ನು ವಸಂತಕುಮಾರ್ ವಹಿಸಿ ಮಾತನಾಡಿದರು. ವಸಂತಕುಮಾರ್ ಮತ್ತು ಸಂಗಡಿಗರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಾಲ್ದಾರೆ ದಿಡ್ಡಳ್ಳಿ ಹಾಡಿಯ ಹರೀಶ್ ಮತ್ತು ತಂಡದವರಿಂದ ಕೊಳಲು ವಾದನ ಮತ್ತು ದಿನನಿತ್ಯ ಬಳಕೆಯ ಖಾಲಿ ತಗಡಿನ ಡಬ್ಬ, ಪ್ಲಾಸ್ಟಿಕ್ಕಿನ ಖಾಲಿ ಡ್ರಮ್‍ಗಳನ್ನು ಉಪಯೋಗಿಸಿ ಅತ್ಯುತ್ತಮ ಸಂಗೀತ ಹೊರ ಹೊಮ್ಮುವಂತೆ ಮಾಡಿದ ಚಮತ್ಕಾರ ನೆರೆದಿದ್ದ ಎಲ್ಲರ ಗಮನಸೆಳೆಯಿತು. ಜೊತೆಗೆ ಕೆ. ಚೆಟ್ಟಳ್ಳಿಯ ವೈ.ಜೆ. ಮನಸ್ವಿ ಅವರು ಹಾಡಿದ ಹಾಡುಗಳು ನೆರೆದಿದ್ದವರನ್ನು ರಂಜಿಸಿತು.
ಸಂಗನಗೌಡ ಪಾಟೀಲರು ಪ್ರಾರ್ಥನಾ ಗೀತೆಗೆ ತಮ್ಮ ಕುಂಚದಿಂದ ಅತ್ಯುತ್ತಮ ಚಿತ್ರವನ್ನು ಬಿಡಿಸಿದರು. ಸದಾನಂದ ಪುರೋಹಿತ್ ತಂಡ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಬಿ.ಆರ್. ಸತೀಶ್ ಮತ್ತು ಟಿ.ಡಿ. ಮೋಹನ್ ಅವರ ತಂಡವೂ ಸೇರಿದಂತೆ ಮೂರು ತಂಡಗಳಿಂದ ಕುಂಚ ಗಾಯನ ಪ್ರದರ್ಶನ ನಡೆಯಿತು. ಶ್ರೀಜಾ ವೇಣುಗೋಪಾಲ್ ಅವರು ಭರತನಾಟ್ಯ, ತಪಸ್ವಿ ಕೆ.ಎಸ್. ಜಾನಪದ ನೃತ್ಯ ನಡೆಸಿಕೊಟ್ಟರು.
ಜೆ.ಕೆ. ಮುತ್ತಮ್ಮ, ಆಶಾ ಟೀಚರ್, ದಿಲೀಶ್ ನಾಯರ್, ಟೋಮಿ ಥಾಮಸ್, ಉದಯಕುಮಾರ್ ಬಿ., ಅಭಿಷೇಕ್ ಟಿ.ಎಂ., ಸಂಧ್ಯಾ ಎಸ್.ಪಿ., ಅಪೂರ್ವ, ಶ್ರಾವ್ಯ ಇವರು ಗೀತಗಾಯನದಲ್ಲಿ ಭಾಗವಹಿಸಿದ್ದರು.
ಡಾ. ಉದಯಕುಮಾರ್ ಅವರು ಚುಟುಕು ವಾಚಿಸಿದರು. ಸದಾನಂದ ಪುರೋಹಿತ್, ವೀಣಾ ಪುರೋಹಿತ್, ಎನ್. ಮಹೇಶ ಚೆಟ್ಟಳ್ಳಿ, ನಾಮೆರ ಜಾನ್ಸಿ ಕುಟ್ಟಪ್ಪ, ಜಯಲಕ್ಷ್ಮಿ ಎಂ.ಬಿ., ಪಿ.ಎಸ್. ವೈಲೇಶ, ಟೋಮಿ ಥಾಮಸ್, ಗಿರೀಶ್ ಕಿಗ್ಗಾಲು, ಹರೀಶ್ ಕಿಗ್ಗಾಲು, ಲವಿನ್ ಲೋಪೆeóï, ಕಡ್ಲೆರ ತುಳಸಿ ಮೋಹನ್, ವೀಣಾ ರಾವ್, ಸೈಮನ್ ಮತ್ತಿತರರು ಕವನ ವಾಚಿಸಿದರು.
ಕಾರ್ಯಕ್ರಮದ ಮೂಲಕ ಕಬಡ್ಡಿ ತರಬೇತುದಾರ ಹಾಗೂ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಎಂ.ಹೆಚ್. ಮೂಸ ಮತ್ತು ಮಾಜಿ ಸೈನಿಕ ಮ್ಯಾರಥಾನ್ ಓಟಗಾರ ಹೊಸೊಕ್ಲು ಚಿನ್ನಪ್ಪ ಹಾಗೂ ಪಾಲಿಬೆಟ್ಟದ ಚೆಶೈರ್ ಹೋಂ ವಿಶೇಷ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಸಿ. ಶಿವರಾಜ್, ವಸಂತಕುಮಾರ್ ಹೊಸಮನೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇಕ್ರಾ ಪಬ್ಲಿಕ್ ಶಾಲೆಯ ಪ್ರಧಾನ ಕಾರ್ಯದರ್ಶಿ ಕೆ.ಯು. ಮಜೀದ್ ಹಾಗೂ ಇಕ್ರಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಅಬ್ದುಲ್ ರಜಾಕ್ ಉಪಸ್ಥಿತರಿದ್ದರು. ಗಿರೀಶ್ ಕಿಗ್ಗಾಲು ಅವರ ರಸಪ್ರಶ್ನೆ ಹಾಗೂ ಪದಬಂಧ ಕಾರ್ಯಕ್ರಮ ಕವಿಗೋಷ್ಠಿಗೆ ಹೆಚ್ಚಿನ ಮೆರುಗು ನೀಡಿತ್ತು.
ಶಿಕ್ಷಕಿ ಬಿ. ಭಾರತಿ ಪ್ರಾರ್ಥಿಸಿದರು. ಟೋಮಿ ಥೋಮಸ್ ನಿರೂಪಿಸಿ, ಸ್ವಾಗತಿಸಿದರೆ, ಜಯಲಕ್ಷ್ಮಿ ಎಂ.ಬಿ. ವಂದಿಸಿದರು. ಗುರುದರ್ಶನ್ ಮತ್ತು ಶಿವಮ್ಮ ಪಿ.ಎಸ್. ನಿರ್ವಹಿಸಿದರು.