ಮಡಿಕೇರಿ, ಫೆ. 20: ಕೂರ್ಗ್ ಇನ್ಸ್ಟಿಟ್ಯೂಟ್ ಪದವಿಪೂರ್ವ ಕಾಲೇಜು, ಹಳ್ಳಿಗಟ್ಟು ಪೊನ್ನಂಪೇಟೆಯಲ್ಲಿ 9ನೇ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ “ಇಗ್‍ನೈಟ್ 2020” ವಿಜ್ಞಾನ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಕೆ.ಬಿ. ತೃಷಾ ತೃತೀಯ ಸ್ಥಾನವನ್ನುಗಳಿಸಿದ್ದಾರೆ. 10ನೇ ತರಗತಿಯ ರಾಶಿ ಬಿ.ಬಿ. ಮುತ್ತಮ್ಮ ಏಳನೇ ಸ್ಥಾನ ಹಾಗೂ ಗಾನವಿ ಬೋಪಣ್ಣ ಜಿ. ಒಂಭತ್ತನೇ ಸ್ಥಾನವನ್ನುಗಳಿಸಿರುತ್ತಾರೆ.