ಶ್ರೀಮಂಗಲ, ಫೆ. 20: ಕಲರ್ಸ್ ಕನ್ನಡ ಟಿವಿ ಚಾನಲ್ನಲ್ಲಿ ರಿಯಾಲಿಟಿ ಶೋ ಹಾಡು ಕರ್ನಾಟಕ ಮೆಗಾ ಅಡಿಶನ್ನಲ್ಲಿ ಭಾಗವಹಿಸಿ ಮುಂದಿನ ಹಂತಕ್ಕೆ ಆಯ್ಕೆಯಾಗಿರುವ 5 ಹಾಡುಗಾರರ ಪೈಕಿ ಕೊಡಗಿನ ಮಚ್ಚಂಡ ಶರನ್ ಅಯ್ಯಪ್ಪ ಒಬ್ಬರಾಗಿದ್ದಾರೆ. ಶರನ್ ಅಯ್ಯಪ್ಪ ಮೈಸೂರಿನ ಕ್ರೇಸ್ಟಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಬಿ.ಎ. ಮಾಡುತ್ತಿದ್ದು, ಕೊಡಗಿನ ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದ ಮಚ್ಚಂಡ ಮನು ಮುತ್ತಣ್ಣ ಮತ್ತು ಇಂದಿರಾ ಅವರ ಪುತ್ರ.