ಸಿದ್ದಾಪುರ, ಫೆ. 19: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥಾಪನಾ ದಿನವನ್ನು ಸಿದ್ದಾಪುರದಲ್ಲಿ ಆಚರಿಸಲಾಯಿತು. ಪಿ.ಎಫ್.ಐ. ಸಿದ್ದಾಪುರ ಘಟಕದ ವತಿಯಿಂದ ಧ್ವಜಾರೋಹಣವನ್ನು ಮಾಲ್ದಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಬೂಬಕರ್ ನೆರವೇರಿಸಿದರು.
ಈ ಸಂದರ್ಭ ಪಿ.ಎಫ್.ಐ. ಸಿದ್ದಾಪುರ ಘಟಕ ಅಧ್ಯಕ್ಷ ಸಿ.ಎ ಅಶ್ರಫ್, ಕಾರ್ಯದರ್ಶಿ ಇಸ್ಮಾಯಿಲ್, ವಲಯ ಕಾರ್ಯದರ್ಶಿ ಜಂಶೀರ್, ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಶೌಕತ್ ಅಲಿ ಇದ್ದರು.