*ಗೋಣಿಕೊಪ್ಪಲು, ಫೆ. 19: ಮಳೆಯ ತೀವ್ರತೆಯಿಂದ ಹಾನಿ ಗೊಳಗಾದ ಮಾಯಮುಡಿ, ಮಡಿಕೆಬೀಡು ಪೆÇ್ರ. ಲಕ್ಷ್ಮಿಸಾಗರ್ ಸಮುದಾಯ ಭವನದ ತಡೆಗೋಡೆ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಒದಗಿಸುವ ಭರವಸೆಯನ್ನು ಶಾಸಕ ಕೆ.ಜಿ. ಬೋಪಯ್ಯ ಮಡಿಕೆಬೀಡು ಗ್ರಾಮಸ್ಥರಿಗೆ ನೀಡಿದರು.

2019ರ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಯಿಂದ ಸಮುದಾಯ ಭವನದ ಸಮೀಪದಲ್ಲೇ ಇದ್ದ ಪಂಚಾಯಿತಿಗೆ ಒಳಪಟ್ಟ ಕೆರೆಯ ಏರಿ ಒಡೆದಿತ್ತು.

ಇದರಿಂದ ಭವನದ ತಡೆಗೋಡೆ ಕುಸಿದು ನಷ್ಟ ಸಂಭವಿಸಿದೆ ಎಂದು ಗ್ರಾಮಸ್ಥರು ಶಾಸಕರಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು.

ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಸ್ಥಳವನ್ನು ಪರಿಶೀಲಿಸಿ ಅನುದಾನ ಒದಗಿಸಿಕೊಡುವುದಾಗಿ ತಿಳಿಸಿದರು. ನಂತರ ಶಾಸಕರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮೂಲಕ ಸಮುದಾಯ ಭವನದ ಸ್ಥಳ ಪರಿಶೀಲಿಸಿ ಅನುದಾನ ಒದಗಿಸುವ ಕ್ರಮ ಕೈಗೊಳ್ಳಲು ಶೀಘ್ರ ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು.

ಪೆÇ್ರ. ಲಕ್ಷ್ಮಿಸಾಗರ್ ಸಮುದಾಯ ಭವನದ ಅಧ್ಯಕ್ಷ ಶಾಂತಕುಮಾರ್, ಮಾಯಮುಡಿ ಸ್ಥಾನೀಯ ಸಮಿತಿ ಅಧ್ಯಕ್ಷ ಲೋಕೇಶ್, ಹಿರಿಯರಾದ ಕಾಳಪಂಡ ಸುಧೀರ್, ಟಿಪ್ಪು ಬಿದ್ದಪ್ಪ, ಸಣ್ಣುವಂಡ ಮಧು, ಚೆಪ್ಪುಡೀರ ಪ್ರದೀಪ್, ವಿ.ಎಸ್.ಎಸ್.ಎನ್. ನಿರ್ದೇಶಕ ಶ್ರೀನಿವಾಸ್, ಮಂಜು, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಈ ಸಂದರ್ಭ ಹಾಜರಿದ್ದರು.