ಸುಂಟಿಕೊಪ್ಪ,ಫೆ.20: ಸುಂಟಿಕೊಪ್ಪದಲ್ಲಿ 100 ರೂ. ಮುಖಬೆಲೆಯ ಖೋಟಾನೋಟು ಪತ್ತೆಯಾಗಿದೆ. ವಂದನಾಬಾರ್ ಮಾಲೀಕರಾದ ಪಟ್ಟೆಮನೆ ಶೇಷಪ್ಪ ಅವರು ಬ್ಯಾಂಕಿಗೆ ಹಣ ಸಂದಾಯ ಮಾಡಲು ಎಣಿಕೆ ಮಾಡುತ್ತಿದ್ದಾಗ ಹೊಸ 100 ರೂ. ಗಾಂಧಿ ಚಿತ್ರದ ಐಎಆರ್ 522671 ನಂಬರಿನ ಖೋಟಾ ನೋಟು ಕಂಡು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.