ವೀರಾಜಪೇಟೆ, ಫೆ. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮರಗೋಡು ಹೊಸ್ಕೇರಿ ಸಮುದಾಯ ಭವನದಲ್ಲಿ ಯೋಜನೆಯ ಮಹಿಳಾ ಜ್ಞಾನವಿಕಾಸ ಪಂಚಶ್ರೀ ಕೇಂದ್ರದ ಸದಸ್ಯರಿಗೆ ಸೋಲಾರ್ ದೀಪ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಸದಾಶಿವ ಗೌಡ ಭಾಗವಹಿಸಿದ್ದರು.

ಅತಿಥಿಯಾಗಿದ್ದ ಸೆಲ್ಕೋ ಸೋಲಾರ್ ಸಂಸ್ಥೆಯ ಮಾರುಕಟ್ಟೆ ಅಧಿಕಾರಿ ಗಣೇಶ್, ಯೋಜನೆಯ ಸಮನ್ವಯಾಧಿಕಾರಿ ಜಯಂತಿ ಮಾತನಾಡಿದರು. ಮೇಲ್ವಿಚಾರಕ ಜಯಶ್ರೀ ಇದ್ದರು. ಸಭೆಯ ಅಧ್ಯಕ್ಷತೆಯನ್ನು ಕೇಂದ್ರದ ಸದಸ್ಯೆ ಗೌರಿ ವಹಿಸಿದ್ದರು. ಸೇವಾಪ್ರತಿನಿಧಿ ಲತಾ ಸಭೆಯ ವರದಿ ಮಂಡಿಸಿದರು. ವೇದಿಕೆಯಲ್ಲಿ ಒಕ್ಕೂಟದ ಪದಾಧಿಕಾರಿ ಶೋಭ, ತರಬೇತಿ ಸಹಾಯಕಿ ಮಮತಾ ಹಾಗೂ ಇತರರು ಉಪಸ್ಥಿತರಿದ್ದರು.