ಸುಂಟಿಕೊಪ್ಪ,ಫೆ.19: ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಅಸುಪಾಸಿನಲ್ಲಿ ಕಳೆದ 20 ದಿನ ಗಳಿಂದ ಅನಾಥ ವಾಗಿ ಅಲೆದಾಡುತ್ತಿದ್ದ ವೃದ್ಧ ರೋರ್ವರನ್ನು ಸುಂಟಿಕೊಪ್ಪ ವಿಕಾಸ ಜನಸೇವಾ ಟ್ರಸ್ಟ್ ಪತ್ತೆ ಹಚ್ಚಿ ಆಶ್ರಮಕ್ಕೆ ಸೇರಿಸಿ ಆಸರೆ ನೀಡಿದೆ. ಇವರ ಹೆಸರು ರಂಗಪ್ಪ ವಯಸ್ಸು (75)ಎಂದು ತಿಳಿದು ಬಂದಿದೆ. ಇವರ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂದು ವಿಕಾಸ ಜನ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ತಿಳಿಸಿದ್ಧಾರೆ.