ಮಡಿಕೇರಿ, ಫೆ. 20: ಕೊಡಗು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿಗಳು ಹಾಗೂ ಗ್ರಾ.ಪಂ.ಗಳಿಗೆ ಕರ್ನಾಟಕ ಸರಕಾರದಿಂದ ಪ್ರಸ್ತುತ ವರ್ಷದಲ್ಲಿ ರೂ. 315 ಕೋಟಿಯಷ್ಟು ಅನುದಾನ ಬಿಡುಗಡೆಯಾಗಿದೆ. ಈ ಹಣವನ್ನು ಸಂಬಂಧಿಸಿದ ಎಲ್ಲಾ ಇಲಾಖೆಗಳು ಮಾರ್ಚ್ ಅಂತ್ಯದೊಳಗೆ ಸದ್ಬಳಕೆ ಮಾಡಿಕೊಂಡು ತ್ವರಿತಗತಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡುವಂತೆ ಸೂಚಿಸಲಾಗಿದೆ .