ಸೋಮವಾರಪೇಟೆ, ಫೆ. 20: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಸಂಯುಕ್ತ ಆಶ್ರಯದಲ್ಲಿ ತಾ.23ರಂದು ತಾಲೂಕಿನ ಸಂಗಯ್ಯನಪುರದಲ್ಲಿ ಆಯೋಜಿಸಿರುವ ಅರೆಭಾಷೆ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂದು ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಮ್ಮೇಳನದ ಪೂರ್ವ ತಯಾರಿ ಪೂರ್ಣ ಗೊಂಡಿದ್ದು, ತಾ. 23ರ ಬೆಳಗ್ಗೆ 9.30ಕ್ಕೆ ಸಂಗಯ್ಯನಪುರ ಗ್ರಾಮದೇವತೆ ದೇವಾಲಯದಿಂದ ಅದ್ಧೂರಿ ಮೆರವಣಿಗೆ ನಡೆಯಲಿದೆ ಎಂದರು.ಮೆರವಣಿಗೆಗೆ ತಾ.ಪಂ. ನಿವೃತ್ತ ವಿಸ್ತರಣಾಧಿಕಾರಿ ಕೆದಂಬಾಡಿ ಈರಪ್ಪ ಚಾಲನೆ ನೀಡಲಿದ್ದಾರೆ. 10.30ಕ್ಕೆ ವಸ್ತು ಪ್ರದರ್ಶನವನ್ನು ತಾ.ಪಂ. ಸದಸ್ಯೆ ಬಟ್ಯಾನ ಸವಿತ ಈರಪ್ಪ ಉದ್ಘಾಟಿಸಲಿದ್ದಾರೆ. ನಂತರ ನಡೆಯುವ ಸಮ್ಮೇಳನವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾಹಿತಿಗಳಾದ ಹೊದ್ದೆಟಿ ಭವಾನಿ ಶಂಕರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ (ಮೊದಲ ಪುಟದಿಂದ) ಸಚಿವ ಸಿ.ಟಿ. ರವಿ, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್, ತಾ.ಪಂ ಅಧ್ಯಕ್ಷೆ ಪುಷ್ಪ ರಾಜೇಶ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ಒದಗಿಸಿದರು.

ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಆಶಯ ಭಾಷಣ ಮಾಡಲಿದ್ದು, ನಂತರ ವಿಚಾರಗೋಷ್ಠಿಯಲ್ಲಿ ಪ್ರಾಂಶುಪಾಲ ರಾದ ಸೀತರಾಮ ಕೇವಡ ಮತ್ತು ಶೈಲಜ ದಿನೇಶ್ ವಿಷಯ ಮಂಡಿಸಲಿದ್ದಾರೆ. ಡಾ. ವಿಶ್ವನಾಥ್ ಬದಿಕಾನ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 1 ಗಂಟೆಗೆ ಲೋಕೇಶ್ ಊರುಬೈಲ್ ಮತ್ತು ತಂಡದವರಿಂದ ಸಿರಿಸುಗ್ಗಿ ಎಂಬ ಜನಪದ ಶೈಲಿಯ ಅರೆಭಾಷೆ ಹಾಡುಗಳ ಗಾಯನ ನಡೆಯಲಿದೆ. 2 ಗಂಟೆಗೆ ಬಾರಿಯಂಡ ಜೋಯಪ್ಪ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಯಡಕೇರಿ ವಿಶ್ವನಾಥ, ಲೀಲಾ ದಾಮೋದÀರ, ಕುದುಪಜೆ ಸಂಜೀವ, ಮೂಡಗದ್ದೆ ವಿನೋದ್, ಪೂಜಾರಿರ ಕೃಪಾ ದೇವರಾಜ್, ಪೆರಿಯಾನ ಹರ್ಷಿತ್ ಕವನವಾಚನ ಮಾಡಲಿದ್ದಾರೆ ಎಂದು ತಿಳಿಸಿದರು.

ಅಪರಾಹ್ನ 3ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಸದ ಪ್ರತಾಪ್‍ಸಿಂಹ, ಎಂಎಲ್‍ಸಿವೀಣಾ ಅಚ್ಚಯ್ಯ, ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಕೊಡಗು ಗೌಡ ಸಮಾಜದ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹೊಸೂರು ಶಿವಪ್ರಕಾಶ್, ಅತ್ಯಾಡಿ ಪೂವಯ್ಯ, ಅಜಿರಂಗಲ ರಾಮಣ್ಣ, ಪಟ್ಟೆಮನೆ ನವನೀತ್, ಪಿ.ಜಿ.ಅಂಬೆಕಲ್, ಅಡ್ಪಂಗಾಯ ಹರಿಪ್ರಸಾದ್, ನಂಗಾರು ನಿಂಗರಾಜು, ಅಮ್ಮಾಜೀರ ಹರ್ಷಿತ್ ಇವರುಗಳನ್ನು ಸನ್ಮಾನಿಸಲಾಗುವದು ಎಂದು ವಿವರಿಸಿದರು.

ಇದೇ ಸಂದರ್ಭ ಎಂ.ಜಿ. ಕಾವೇರಮ್ಮ, ಸಂಗೀತ ರವಿರಾಜ್, ಕಟ್ರತನ ಲಲಿತ ಅಯ್ಯಣ್ಣ ಬರೆದಿರುವ ಪುಸ್ತಕಗಳು ಬಿಡುಗಡೆಗೊಳ್ಳಲಿದೆ. ಸಂಜೆ 5ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಕಾವೇರಿನಾಡು ಕಲಾವಿದರಿಂದ “ನಾಡಿನ ಸಂಸ್ಕøತಿ ಹಿರಿಮೆ” ನಾಟ್ಯ ರೂಪಕ ಮೂಡಿಬರಲಿದೆ ಎಂದರು.

ಗೋಷ್ಠಿಯಲ್ಲಿ ಬಟ್ಟಿಯನ ಈರಪ್ಪ, ಕೊಯ್ಯಮುಡಿ ಜಯಕುಮಾರ, ಅಂಜಿರಂಗಲ ರಾಮಣ್ಣ, ಪರ್ಲೆಕೋಟಿ ಶೈಲಾ ಸತೀಶ್ ಉಪಸ್ಥಿತರಿದ್ದರು.