ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2019-20ನೇ ಸಾಲಿನಲ್ಲಿ ವಿವಿಧ ಯೋಜನೆ ಹಮ್ಮಿಕೊಳ್ಳಲಾಗಿದೆ.
ಚೈತನ್ಯ ಸಬ್ಸಿಡಿ ಯೋಜನೆಯಲ್ಲಿ : ಹಿಂದುಳಿದ ವರ್ಗಗಳ ಜನರು ಕೈಗೊಳ್ಳುವ ವ್ಯಾಪಾರ, ಕೈಗಾರಿಕೆ, ಸೇವಾ ಉದ್ದಿಮೆ ಹಾಗೂ ಕೃಷಿ ಅವಲಂಭಿತ ಚಟುವಟಿಕೆಗಳಿಗೆ ಬ್ಯಾಂಕ್‍ಗಳ ಸಹಯೋಗದೊಂದಿಗೆ ಗರಿಷ್ಠ ರೂ.5 ಲಕ್ಷಗಳ ಸಾಲವನ್ನು ಒದಗಿಸುವುದು. ನಿಗಮದಿಂದ ಶೇ. 20 ರಷ್ಟು ಗರಿಷ್ಠ ರೂ. 25 ಸಾವಿರ ಸಹಾಯಧನವನ್ನು ಮಂಜೂರು ಮಾಡಲಾಗುವುದು.
ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ: ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳ ಅನುಸಾರ ನಿಗಮದಿಂದಲೇ ನೇರವಾಗಿ ಸಾಲ ಸೌಲಭ್ಯ ಒದಗಿಸಲಾಗುವುದು. ರೂ. 50 ಸಾವಿರ ವರೆಗಿನ ಆರ್ಥಿಕ ಚಟುವಟಿಕೆಗಳಿಗೆ ಶೇ.30ರಷ್ಟು ಗರಿಷ್ಠ ರೂ. 10 ಸಾವಿರ ಸಹಾಯಧನವನ್ನು, ಉಳಿಕೆ ಶೇ.70 ರಷ್ಟು ಗರಿಷ್ಠ ರೂ.40 ಸಾವಿರಗಳಲ್ಲಿ ವಾರ್ಷಿಕ ಶೇ. 4 ರ ಬಡ್ಡಿ ದರದಲ್ಲಿ ಸಾಲ. ರೂ. 5 ಸಾವಿರದಿಂದ ರೂ. 1 ಲಕ್ಷ ವರೆಗಿನ ಆರ್ಥಿಕ ಚಟುವಟಿಕೆಗಳಿಗೆ ಶೇ. 20 ರಷ್ಟು ಗರಿಷ್ಠ ರೂ. 20 ಸಾವಿರಗಳ ಸಹಾಯಧನ ಉಳಿಕೆ ಶೇ.80 ರಷ್ಟು ಗರಿಷ್ಠ ರೂ.80 ಸಾವಿರಗಳು ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಸಾಲ. ರೂ. 10 ಸಾವಿರ ದಿಂದ ರೂ. 2 ಲಕ್ಷಗಳ ವರೆಗಿನ ಘಟಕ ವೆಚ್ಚ ಆರ್ಥಿಕ ಚಟುವಟಿಕೆಗಳಿಗೆ ಶೇ.15 ರಷ್ಟು ಕನಿಷ್ಟ ರೂ. 20 ಸಾವಿರ ಹಾಗೂ ಗರಿಷ್ಠ ರೂ. 30 ಸಾವಿರಗಳ ಸಹಾಯಧನ ಉಳಿಕೆ ಶೇ.85 ರಷ್ಟು ಗರಿಷ್ಠ ರೂ.1.70 ಸಾವಿರಗಳು ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಸಾಲ. ಈ ಯೋಜನೆಯಲ್ಲಿ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿ ಮರುಪಾವತಿಸಬೇಕು. 2 ತಿಂಗಳು ವಿರಾಮಾವಧಿ ಇರುತ್ತದೆ.
ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸಬುದಾರರಿಗೆ ಸಾಲ ಮತ್ತು ಸಹಾಯಧನ: ಈ ಯೋಜನೆಯಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರ ನಿರ್ವಹಣೆಗೆ ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳ ಅನುಸಾರ ನಿಗಮದಿಂದಲೇ ನೇರವಾಗಿ ಸಾಲ ಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚ ರೂ. 50 ಸಾವಿರಗಳಿಗೆ ಶೇ.30 ರಷ್ಟು ಗರಿಷ್ಠ ರೂ.10 ಸಾವಿರಗಳ ಸಹಾಯಧನ ಉಳಿಕೆ ಶೇ.70 ರಷ್ಟು ರೂ.40 ಸಾವಿರಗಳನ್ನು ಶೇ.2ರ ಬಡ್ಡಿ ದರದಲ್ಲಿ ಸಾಲ. ಘಟಕ ವೆಚ್ಚ ರೂ. 5 ಸಾವಿರ ದಿಂದ ರೂ. 1 ಲಕ್ಷಗಳವರೆಗೆ ಶೇ.20 ರಷ್ಟು ಗರಿಷ್ಠ ರೂ. 20 ಸಾವಿರಗಳ ಸಹಾಯಧನ ಉಳಿಕೆ ಶೇ.80 ರಷ್ಟು ರೂ. 80 ಸಾವಿರಗಳನ್ನು ಶೇ. 2 ರ ಬಡ್ಡಿ ದರದಲ್ಲಿ ಸಾಲ. ಘಟಕ ವೆಚ್ಚ ರೂ.10 ಸಾವಿರ ದಿಂದ 2 ಲಕ್ಷಗಳವರೆಗೆ ಶೇ.15 ರಷ್ಟು ರೂ.20 ಸಾವಿರಗಳು ಗರಿಷ್ಠ ರೂ. 30 ಸಾವಿರ ಸಹಾಯಧನ ಉಳಿಕೆ ಶೇ.85 ರಷ್ಟು ರೂ.1.70ಸಾವಿರಗಳನ್ನು ಶೇ.2ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ.
ಕಿರುಸಾಲ ಯೋಜನೆ: ಈ ಯೋಜನೆಯಲ್ಲಿ ನಗರ, ಪಟ್ಟಣ ಮತ್ತು ಹೋಬಳಿ ಹಂತಗಳಲ್ಲಿ ಸಣ್ಣ ವ್ಯಾಪಾರ ಚಟುವಟಿಕೆಗಳಾದ ಹಣ್ಣು, ತರಕಾರಿ, ಹಾಲು, ಹೂ, ಮೀನು, ಟೀ ವ್ಯಾಪಾರ ಮತ್ತಿತರ ವ್ಯಾಪಾರ ಚಟುವಟಿಕೆಗಳನ್ನು ಮಾಡಲು ಸ್ವ ಸಹಾಯ ಸಂಘಗಳ ಮೂಲಕ ಸಾಲ ನೀಡಲಾಗುವುದು.ಪ್ರತಿ ಫಲಾನುಭವಿಗೆ ಗರಿಷ್ಠ ರೂ.5 ಸಾವಿರ ಸಹಾಯಧನ ಹಾಗೂ ರೂ. 10ಸಾವಿರಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುವುದು.
ಈ ಯೋಜನೆಯಲ್ಲಿ ಪಡೆದ ಸಾಲವನ್ನು 36 ತಿಂಗಳಲ್ಲಿ 12 ತ್ರೈಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕು. ಗಂಗಾ ಕಲ್ಯಾಣ ನೀರಾವರಿ ಯೋಜನೆ : ಈ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಚೆನ್ನರಸೇಗೌಡ ಅವರು ಮಾಹಿತಿ ನೀಡಿದ್ದಾರೆ.