ನಾಪೆÇೀಕ್ಲು, ಫೆ. 19: ನಾಪೆÇೀಕ್ಲು ದವಸ ಭಂಡಾರದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕಂಗಾಂಡ ಜಾಲಿ ಪೂವಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಿವಚಾಳಿಯಂಡ ಕಿಶೋರ್ ಬೋಪಣ್ಣ, ನಿರ್ದೇಶಕರಾಗಿ ಕುಲ್ಲೇಟಿರ ಅರುಣ್ ಬೇಬ, ಶಿವಚಾಳಿಯಂಡ ಸುಭಾಷ್ ಸೋಮಯ್ಯ, ಪಾಡಿಯಮ್ಮಂಡ ಮನು ಮಹೇಶ್, ಅರೆಯಡ ವಿನೋದ್, ಬೊಪ್ಪಂಡ ಕವನ್, ಅಮ್ಮಂಡ ಬಿ. ಅಶೋಕ್, ಕುಲ್ಲೇಟಿರ ರಾಜೇಶ್, ಅಜ್ಜೇಟಿರ ರಾಣಿ ಪಳಂಗಪ್ಪ, ಶಿವಚಾಳಿಯಂಡ ಸುಬ್ಬಮ್ಮ ಬಿದ್ದಪ್ಪ, ಹೆಚ್.ಎ. ಬೊಳ್ಳು ಆಯ್ಕೆಯಾಗಿದ್ದಾರೆ. ಈ ಸಂದರ್ಭ ನಾಪೆÇೀಕ್ಲು ಬಿಜೆಪಿ ಹೋಬಳಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ಚುನಾವಣಾಧಿಕಾರಿ ಮೋಹನ್ ಕುಮಾರ್, ದವಸ ಭಂಡಾರದ ಕಾರ್ಯದರ್ಶಿ ಕೊಂಬಂಡ ಕೇಶವ ಇದ್ದರು.