ಅವಿರೋಧವಾಗಿ ಆಡಳಿತ ಮಂಡಳಿ ಆಯ್ಕೆ
ಮಡಿಕೇರಿ, ಫೆ. 19: ಅಮ್ಮತ್ತಿ ಒಂಟಿಯಂಗಡಿಯಲ್ಲಿರುವ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಿವೃತ್ತ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಅವರು ಆಯ್ಕೆಯಾಗಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ನೂತನ ಆಡಳಿತಮಂಡಳಿ ರಚನೆಗೊಂಡಿದ್ದು ಉಪಾಧ್ಯಕ್ಷರಾಗಿ ಹರೀಶ್ ವಿ.ಆರ್., ನಿರ್ದೇಕರುಗಳಾಗಿ ಸವಿತಾ ಪಿ., ಕಾರ್ಯಪ್ಪ ಎ.ಎಂ., ತಮ್ಮಯ್ಯ ಹೆಚ್.ಜೆ., ಮಂಜುನಾಥ್ ಪಿ.ಎ., ದಿನೇಶ್ ಕೆ.ಎಸ್., ಪ್ರಭಾವತಿ ವಿ.ಆರ್., ಗಣಪತಿ ಬಿ.ಪಿ., ಗಣೇಶ್ ಕೆ.ಎಂ., ಹಾಗೂ ಉತ್ತಪ್ಪ ಜೆ.ಸಿ. ಆಯ್ಕೆಯಾಗಿದ್ದಾರೆ . ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ತಮ್ಮಯ್ಯ ವಿ.ಸಿ. ಹಾಗೂ ಮೇಲ್ವಿಚಾರಕರಾಗಿ ಶಂಕರ ಸಿ. ಕಾರ್ಯನಿರ್ವಹಿಸುತ್ತಿದ್ದಾರೆ.