ಕುಶಾಲನಗರ, ಫೆ. 19: ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿರುವ ಶ್ರೀ ಮುತ್ತಪ್ಪ ದೇವಾಲಯದ ಎರಡು ದಿನಗಳ ತೆರೆ ಮಹೋತ್ಸವ ಮುಕ್ತಾಯವಾಯಿತು.

ಶ್ರೀ ಮುತ್ತಪ್ಪ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಶನಿವಾರ ಗಣಪತಿ ಹೋಮ, ನಂತರ ಧ್ವಜಾರೋಹಣ ನಡೆಯಿತು. ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲ ಅರ್ಪಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಮುತ್ತಪ್ಪ ಮಲೈ ಇರುಕ್ಕಲ್, ಸಂಜೆ ವೆಳ್ಳಾಟಂ, ತಾಲಪೊಲಿ ಕಾರ್ಯಕ್ರಮಗಳು ನಡೆದವು. ಸಂಜೆ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯಿಂದ ಮೆರವಣಿಗೆ ಬಳಿಕ ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಭಾನುವಾರ ಬೆಳಗ್ಗೆ ತಿರುವಪ್ಪನ ಕಾರ್ಯಕ್ರಮ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.

ಈ ಸಂದರ್ಭ ಟ್ರಸ್ಟ್‍ನ ಅಧ್ಯಕ್ಷ ವರದ, ಪ್ರಧಾನ ಕಾರ್ಯದರ್ಶಿ ಕೆ.ಕೆ. ದಿನೇಶ್‍ಕುಮಾರ್, ಆಡಳಿತ ಮಂಡಳಿ ಸದಸ್ಯರು ಮತ್ತು ದೇವಾಲಯ ಒಕ್ಕೂಟದ ಪ್ರತಿನಿಧಿಗಳು ಇದ್ದರು.