ಗೋಣಿಕೊಪ್ಪ ವರದಿ, ಫೆ. 19 : ಕೊಡಗು ಜಾಂಭವ ಯುವಸೇನೆ ವತಿಯಿಂದ ಶಿವರಾತ್ರಿ ಪ್ರಯುಕ್ತ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ತಾ. 21 ರಿಂದ ಆಯೋಜಿಸಿರುವ ಟೆನ್ನಿಸ್‍ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳಲಿವೆ.
ತಾ. 21, 22 ಹಾಗೂ 23 ರಂದು ಟೂರ್ನಿ ನಡೆಯಲಿದೆ. ಈಗಾಗಲೇ ತಂಡಗಳಾದ ಎಂ. ಕೆ. ಕ್ರಿಕೆಟರ್ಸ್, ಲಯನ್, ಕಣ್ಣನ್ ಟಯರ್ಸ್, ಫ್ರೀಡಂ, ಎ. ಒನ್, ಡಾಲ್ಫಿನ್ಸ್, ಸೈಕ್ನೋನ್, ಪ್ರತಿಭಾ, ವಿರಾಟ್, ಈಗಲ್ ಅಟೆಕರ್ಸ್, ಎನ್.ವೈ.ಸಿ ಹಾಗೂ ಕಾವೇರಿ ಕ್ರಿಕೆಟರ್ಸ್ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಆಟಗಾರರನ್ನು ಹರಾಜು ಮೂಲಕ ಖರೀದಿಸಲಾಗಿದೆ.
ಅಂದು ಬೆ. 10 ಗಂಟೆಗೆ ಅಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ತಂಡದ ಮಾಲೀಕರು, ಆಟಗಾರರು ಮೈದಾನಕ್ಕೆ ಆಗಮಿಸಲಿದ್ದಾರೆ. ಜಾಂಭವ ಯುವಸೇನೆ ರಾಜ್ಯಾಧ್ಯಕ್ಷ ಡಾ. ರಮೇಶ್ ಚಕ್ರವರ್ತಿ ಮೆರವಣಿಗೆ ಉದ್ಘಾಟಿಸಲಿದ್ದಾರೆ.
ಶಾಸಕ ಕೆ. ಜಿ. ಬೋಪಯ್ಯ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಕೊಡಗು ಜಾಂಬವ ಯುವಸೇನೆ ಜಿಲ್ಲಾಧ್ಯಕ್ಷ ಸತೀಶ್ ಸಿಂಗಿ, ಪೊನ್ನಂಪೇಟೆ ಗ್ರಾ. ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರ ಗಣೇಶ್, ಪೊನ್ನಂಪೇಟೆ ಸ್ಥಾನೀಯ ಬಿಜೆಪಿ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ಜಿ. ಪಂ. ಸದಸ್ಯರಾದ ಸಿ. ಕೆ. ಬೋಪಣ್ಣ, ಮೂಕೊಂಡ ವಿಜು ಸುಬ್ರಮಣಿ, ಪೊಲೀಸ್ ಉಪ ನಿರೀಕ್ಷಕ ಕುಮಾರ್, ಪ್ರಮುಖರಾದ ಎಚ್. ಎನ್. ರವಿ, ನೆಲ್ಲೀರ ಚಲನ್, ಕಿಲನ್ ಗಣೊತಿ, ತೀತಮಾಡ ಸುಗುಣ, ಸಿರಾಜ್‍ಬೇಗ್, ಪರಶುರಾಮ್, ಅಮ್ಮತ್ತೀರ ಸುರೇಶ್, ಸಂತೋಷ್, ಶ್ರೀನಿವಾಸ್, ಮಹೇಶ್, ಗಣೇಶ್, ಅರುಣ ಪಾಲ್ಗೊಳ್ಳಲಿದ್ದಾರೆ.