ಮಡಿಕೇರಿ, ಫೆ. 20: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಸಮಾರಂಭ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಛತ್ರಪತಿ ಶಿವಾಜಿ ಅವರ ಸಾಧನೆ ಅವಿಸ್ಮರಣೀಯ. ಅವರ ತಾಯಿ ಜೀಜಾಭಾಯಿ ಅವರು ದೇಶದ ಸುಧಾರಣೆ ಮತ್ತು ಹೋರಾಟ ಮಾಡಲು ಶಿವಾಜಿಯವರಿಗೆ ಪ್ರೇರಣೆಕೊಟ್ಟರು. ಮುಂದಿನ ಪೀಳಿಗೆಯ ಮಕ್ಕಳನ್ನು ಹೇಗೆ ಬೆಳಸಬೇಕು ಎಂದು ತಾಯಂದಿರು ತಿಳಿದಿರಬೇಕು ಎಂದರು.
ಈಗಿನ ವಿದ್ಯಾರ್ಥಿಗಳಿಗೆ ರಾಮಾಯಣ ಮಹಾಭಾರತದ ಮಹತ್ವ ತಿಳಿದಿರುವುದಿಲ್ಲ. ಆದ್ದರಿಂದ ಪೋಷಕರು ಸಂಸ್ಕøತಿ ಮತ್ತು ದೇಶದ ಅಭಿವೃದ್ಧಿಯಲ್ಲಿ ಮಕ್ಕಳಿಗಿರುವ ಜವಾಬ್ದಾರಿ ಬಗ್ಗೆ ತಿಳಿಸುವಲ್ಲಿ ಒತ್ತು ನೀಡಬೇಕು. ಪೋಷಕರು ಮಕ್ಕಳನ್ನು ದೇಶಕ್ಕೆ ಮಾದರಿಯಾಗುವಂತೆ ಬೆಳಸಬೇಕು ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ. ದರ್ಶನ್ ಮಾತನಾಡಿ, ಇದು ಮಹಾನ್ ಯೋಧನ ಜಯಂತಿ. ಶಿವಾಜಿಯವರ ಆಡಳಿತದಲ್ಲಿ ಚಾಕಚಕ್ಯತೆ ಇತ್ತು. ತಾಯಿಯ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಛತ್ರಪತಿ ಶಿವಾಜಿಯವರ ತಾಯಿ ಜೀಜಾಭಾಯಿಯವರಿಂದ ತಿಳಿಯಬೇಕು. ಛತ್ರಪತಿ ಶಿವಾಜಿಯವರ ಜೀವನದಿಂದ ನಾವು ಕಲಿಯೋದು ಸಾಕಷ್ಟಿದೆ ಎಂದು ಅವರು ಹೇಳಿದರು.
ಫೀಲ್ಡ್ ಮ್ಸಾರ್Àಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್ ಡಾ. ಬಿ. ರಾಘವ ಮಾತನಾಡಿ, ಇತಿಹಾಸದಲ್ಲಿ ಸೇವೆಗಳನ್ನು ಮಾಡಿದವರನ್ನು ನೆನೆಯುವ ಉದ್ದೇಶದಿಂದ ವಿವಿಧ ಜಯಂತಿಯನ್ನು ಮಾಡಲಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಫೀಲ್ಡ್ ಮಾಷರ್Àಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗದ ಅಧ್ಯಾಪಕಿ ಡಾ. ಜಯಂತಿ ವಹಿಸಿದ್ದರು. ಖಜಾನೆ ಇಲಾಖೆಯ ಉಪ ನಿರ್ದೆಶಕಿ ಸಿ. ಪದ್ಮಜಾ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಣಜೂರು ಮಂಜುನಾಥ್ ಅವರು ನಿರೂಪಿಸಿದರು. ಷÀಡಕ್ಷರಿ ಮತ್ತು ತಂಡದವರು ನಾಡಗೀತೆ ಹಾಡಿದರು.