ಮಡಿಕೇರಿ, ಫೆ. 20: ಇಂದು ಪೂರ್ವಾಹ್ನ ರಾಷ್ಟ್ರೀಯ ಹೆದ್ದಾರಿಯ ಬಳಿ ಸಿಂಕೋನ ತೋಟದ ಬಳಿ ಚವರ್ಲೆಟ್ ಆಸ್ಟ್ರ (ಕೆಎ09 ಎಂಡಿ2858) ಕಾರೊಂದು ಅವಘಡಕ್ಕೆ ಈಡಾಗಿದ್ದು, ಕಾರು ಚಾಲಕ ಸುಂಟಿಕೊಪ್ಪ 2ನೇ ವಿಭಾಗದ ರಫಿಕ್ ಎಂಬವರು ಸಾವಿಗೀ ಡಾಗಿದ್ದಾರೆ. ಸುಂಟಿಕೊಪ್ಪದಿಂದ ಕುಶಾಲನಗರ ದೆಡೆಗೆ ತೆರಳುತ್ತಿದ್ದ ಕಾರನ್ನು ರಫೀಕ್ ಚಲಾಯಿಸುತ್ತಿದ್ದರು. ಕಾರು ನಿಯಂತ್ರಣ ತಪ್ಪಿ ಬರೆಯೊಂದಕ್ಕೆ ಅಪ್ಪಳಿಸಿದ್ದು, ಇದರಿಂದಾಗಿ ರಫೀಕ್ ತೀವ್ರ ಗಾಯಗೊಂಡು ಮೈಸೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದ್ದಾರೆ. ಅಲ್ಲದೆ ಕಾರಿನಲ್ಲಿ ಅವರೊಂದಿಗೆ 7ನೇ ಹೊಸಕೋಟೆಯ ಖಾದರ್ ಎಂಬವರ ಪುತ್ರಿ ಸಫ್ರೀನಾ ಎಂಬ ಯುವತಿಯು ತೆರಳುತ್ತಿದ್ದು ಆಕೆಗೂ ಕೂಡ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಎಸ್.ಐ ಚಂದ್ರಶೇಖರ್ ಅವರು ಮೊಕದ್ದಮೆ ದಾಖಲಿಸಿದ್ದಾರೆ.