ಪೊನ್ನಂಪೇಟೆ, ಫೆ. 20: ಫೆಬ್ರವರಿ 22 ರಿಂದ ಒಡಿಸ್ಸÀದ ಭುವನೇಶ್ವರದಲ್ಲಿ ನಡೆಯುವ ಮಹಿಳೆಯರ ಖೇಲೋ ಇಂಡಿಂiÀi ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯ ಹಾಕಿ ತಂಡದ ತರಬೇತುದಾರರಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಹಾಕಿ ತರಬೇತುದಾರ ಮಿನ್ನಂಡ ಎಲ್. ಜೋಯಪ್ಪ ಆಯ್ಕೆಯಾಗಿದ್ದಾರೆ. ಮಲ್ಲಮಾಡ ಲೀಲಾವತಿ ನಾಯಕತ್ವದ ಮಂಗಳೂರು ವಿಶ್ವವಿದ್ಯಾಲಯ ಹಾಕಿ ತಂಡದಲ್ಲಿ ಸಿ.ಆರ್. ಕುಮುದ, ಸಿ. ಪ್ರಿಯದರ್ಶಿನಿ, ಸಿ.ಜೆ. ಸಂಗೀತ, ಪಿ.ಎ.ಪವಿತ್ರ, ಎನ್. ನಿವೇದಿತ, ಎಂ.ಎಸ್. ಕೀರ್ತನ, ಕೆ.ಎಸ್.ವಿದ್ಯಾ, ಕೆ.ಪಿ. ಮಿಲನ, ಎಂ.ಪಾರ್ವತಿ, ಕೆ.ಎ. ದೀಪ್ತಿ, ಕೆ.ಎ.ಪಾರ್ವತಿ, ಎಸ್.ಪಿ.ಲಿಖಿತ, ಆರ್, ಸುಶ್ಮಿತ, ಎಂ,ಜೆ. ಲೀಲಾವತಿ, ಆರ್. ಚಲುವಾಂಭ, ಆಗ್ನಿಸ್, ಕೆ.ಎಸ್. ನೀತು ಹಾಗೂ ಪದ್ಮಪ್ರಿಯ ಭಾಗವಹಿಸುತ್ತಿದ್ದಾರೆ.