ಕೂಡಿಗೆ, ಫೆ. 19 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಈ ವ್ಯಾಪ್ತಿಯಲ್ಲಿ ಜೋಳದ ಬೆಳೆ ಹಾಗೂ ಸಿಹಿಗೆಣಸು ಬೆಳೆಗಳನ್ನು ಸಂಪೂರ್ಣ ನಾಶಪಡಿಸಿವೆ. ಈ ಭಾಗದ ಬಿ.ಟಿ.ಕಾವೇರಪ್ಪ, ಬಾಲಚಂದ್ರ ಎಂಬವರ ಎರಡು ಎಕರೆ ಪ್ರದೇಶದಲ್ಲಿ ಜೋಳದ ಬೆಳೆಯನ್ನು ತಿಂದು ತುಳಿದು ನಷ್ಟಪಡಿಸಿವೆ. ಸಂಜೆ 8 ಗಂಟೆ ಸಂದರ್ಭದಲ್ಲಿ ಕಣಿವೆ ಸೀಗೆಹೊಸೂರು ರಸ್ತೆ ಮಾರ್ಗದಲ್ಲಿ ಕಾಡಾನೆ ಹಿಂಡನ್ನು ನೋಡಿರುವ ಗ್ರಾಮಸ್ಥರು ಆ ಮಾರ್ಗದಲ್ಲಿ ತೆರಳಲು ಭಯ ಪಡುತ್ತಿದ್ದಾರೆ. ಅರಣ್ಯ ಇಲಾಖೆಯ ಕಣಿವೆ ಉಪವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.