ಸೋಮವಾರಪೇಟೆ, ಫೆ. 19: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ವತಿಯಿಂದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಎಸ್.ಎಸ್.ಎಲ್.ಸಿ. ದೈಹಿಕ ಶಿಕ್ಷಣ ವಿಷಯದ ಮೌಲ್ಯಮಾಪನ ಕುರಿತ ತರಬೇತಿ ಕಾರ್ಯಾಗಾರ ಇತ್ತೀಚೆಗೆ ಶಂಕಪ್ಪ ಹಾಲ್‍ನಲ್ಲಿ ನಡೆಯಿತು.

ಜಿಲ್ಲಾ ದೈಹಿಕ ಶಿಕ್ಷಣ ಆಧಿಕಾರಿ ವೆಂಕಟೇಶ್, ತಾಲೂಕು ಅಧಿಕಾರಿ ಸದಾಶಿವ ಎಸ್. ಪಲ್ಲೇದ್, ದೈಹಿಕ ಶಿಕ್ಷಣ ಶಿಕ್ಷಕÀರ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮಣ್, ಪೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್, ತಾಲೂಕು ಅಧ್ಯಕ್ಷ ಡಿ.ಪಿ. ಧರ್ಮಪ್ಪ, ಪ್ರಾಥಮಿಕ ದೈ.ಶಿ. ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕರುಂಬಯ್ಯ ಇದ್ದರು.

ಇತ್ತೀಚೆಗೆ ವರ್ಗಾವಣೆಗೊಂಡ ದೈ.ಶಿ. ಶಿಕ್ಷಕರಾದ ಪರಮೇಶ್ವರಪ್ಪ, ಕೃಷ್ಣಪ್ಪ, ಕಳೆದ ಸಾಲಿನಲ್ಲಿ ಅಧಿಕ ಅಂಕಗಳಿಸಿದ ಚಿನ್ಮಯ್ಯ ಅವರನ್ನು ಸನ್ಮಾನಿಸಲಾಯಿತು.