ಕುಶಾಲನಗರ, ಫೆ. 18: ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತಂಡದ ಸಮಾರೋಪ ಸಮಾರಂಭ ನಡೆಯಿತು. ಶಾಲೆಯ ಉಪ ಪ್ರಾಂಶುಪಾಲೆ ಬಿ.ಬಿ. ಸಾವಿತ್ರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಮ್ಯುನಿಟಿ ಪೆÇಲೀಸ್ ಅಕಾರಿ ಡಾ. ಸದಾಶಿವಯ್ಯ ಪಲ್ಲೇದ ಸ್ಟೂಡೆಂಟ್ ಪೊಲೀಸ್ ಕೆಡೆಟ್‍ಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾಹಿತಿ ಕಣಿವೆ ಭಾರದ್ವಾಜ್ ಸಮಾರೋಪ ಭಾಷಣ ಮಾಡಿದರು. ವಿದ್ಯಾರ್ಥಿಗಳು ಕಮ್ಯುನಿಟಿ ಪೆÇಲೀಸ್ ಆಫೀಸರ್ ಡಾ. ಸದಾಶಿವಯ್ಯ ಪಲ್ಲೆದ್, ತರಬೇತುದಾರರಾದ ಪೊಲೀಸ್ ಅಧಿಕಾರಿ ಮುದ್ದುರಾಜ, ಶಾಲೆಯ ಉಪ ಪ್ರಾಂಶುಪಾಲೆ ಬಿ.ಬಿ. ಸಾವಿತ್ರಿ ಹಾಗೂ ಶಿಕ್ಷಕ ಉ.ರಾ. ನಾಗೇಶ್ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ದಿನೇಶ್, ಮಹೇಂದ್ರ, ದೇವಕಿ, ಸುಜಾತ, ಅನಿತಾ, ರಶ್ಮಿ, ಉಮಾದೇವಿ ಮತ್ತಿತರರು ಇದ್ದರು.