ಮಡಿಕೇರಿ, ಫೆ. 18: ಅರಂತೋಡು ಜಮಾಅತ್ ವತಿಯಿಂದ ಹಿತೈಷಿಗಳ ಮತ್ತು ಗಲ್ಫ್ ಸಹೋದರರ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಮಸೀದಿಯ ಕಟ್ಟಡದ ಅಭಿವೃದ್ಧಿಗೆ ವಕ್ಫ್ ಇಲಾಖೆಯಿಂದ ಹೆಚ್ಚಿನ ಅನುದಾನಕೊಡಿಸಿದ ಸಂಸ್ಥೆಯ ಸಲಹಾ ಸಮಿತಿ ಸದಸ್ಯ ಟಿ.ಎಂ. ಶಹೀದ್ ಹಾಗೂ ಅರಂತೋಡು ಜಮಾಅತ್ ಉಪಸಮಿತಿಯ ಸಂಚಾಲಕ ಸೈಫುದ್ಧೀನ್ ಪಠೇಲ್‍ರನ್ನು ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದ್ದರು. ದುವಾವನ್ನು ಇಮಾಮ್ ಇಸಾಕ್ ಬಾಖವಿ ನೆರವೇರಿಸಿದರು. ವೇದಿಕೆಯಲ್ಲಿ ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ. ಮಹಮ್ಮದ್, ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ತಾಜುದ್ದೀನ್ ಅರಂತೋಡು ಜಂಟಿ ಕಾರ್ಯದರ್ಶಿಗಳಾದ ಎ. ಹನೀಫ್, ಅಮೀರ್ ಕುಕ್ಕುಂಬಳ ಉಪಸ್ಥಿತರಿದ್ದರು. ಜಮಾಅತ್ ಕಾರ್ಯದರ್ಶಿ ಕೆ.ಎಂ. ಮೂಸಾನ್ ಸ್ವಾಗತಿಸಿದರು. ಅಸೋಸಿಯೇಶನ್ ಅಧ್ಯಕ್ಷ ಎಸ್.ಎಂ. ಮಜೀದ್ ವಂದಿಸಿದರು.