ಗೋಣಿಕೊಪ್ಪಲು, ಫೆ. 18: ಬಲ್ಯಮುಂಡೂರು ಗ್ರಾಮ ಪಂಚಾಯಿತಿಯಲ್ಲಿ 14ನೇ ಹಣಕಾಸು ಯೋಜನೆಯಡಿಯಲ್ಲಿ ವಿಶೇಷಚೇತನರಿಗೆ ಗಾಲಿ ಕುರ್ಚಿ ಮತ್ತು ಊರುಗೋಲು ವಿತರಣೆ ಮಾಡಲಾಯಿತು.

ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಖುಷಿ ಕುಮಾರ್ ಸದಸ್ಯರುಗಳಾದ ಪ್ರಕಾಶ್, ಬೋಪಣ್ಣ, ಪ್ರೀತು ಪೊನ್ನಪ್ಪ, ಸ್ವಾತಿ, ಪವಿತ್ರ, ಇಂದಿರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜೇಶ್ ಹಾಗೂ ಸಿಬ್ಬಂದಿ ಇದ್ದರು.