ಮಡಿಕೇರಿ, ಫೆ. 18: ನೆಲ್ಲಿಹುದಿಕೇರಿ ಪ್ರಗತಿಪರ ಆಂದೋಲನಾ ವೇದಿಕೆ ವತಿಯಿಂದ ತಾ. 19 ರಂದು (ಇಂದು) ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಸಂವಿಧಾನದ ಕುರಿತು ವಿಚಾರ ಸಂಕಿರಣ ನಡೆಯಲಿದೆ ಎಂದು ವೇದಿಕೆಯ ಗ್ರಾಮ ಸಮಿತಿ ಸಂಚಾಲಕ ಪಿ.ಆರ್. ಭರತ್ ತಿಳಿಸಿದ್ದಾರೆ.

ವೇದಿಕೆಯ ಅಧ್ಯಕ್ಷ ಟಿ.ಜೆ. ಸಬಾಸ್ಟಿನ್ ಅಧ್ಯಕ್ಷತೆಯಲ್ಲಿ ಸಂಜೆ 6.30 ಗಂಟೆಗೆ ನೆಲ್ಲಿಹುದಿಕೇರಿ ಸಮುದಾಯ ಭವನ(ಶಾದಿ ಮಹಾಲ್)ನಲ್ಲಿ ವಿಚಾರ ಸಂಕಿರಣ ನಡೆಯಲಿದೆ.