ಸೋಮವಾರಪೇಟೆ, ಫೆ. 18: ತಾಲೂಕಿನ ಹುದುಗೂರು ಗ್ರಾಮದ ಉಮಾಮಹೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನಡೆಯುವುದಾಗಿ ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.
ತಾ. 21 ರಂದು ಬೆಳಿಗ್ಗೆ 8.30 ರಿಂದ ದೇವಾಲಯದಲ್ಲಿ ಶ್ರೀ ಮಹಾಗಣಪತಿ ಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ, ಶ್ರೀ ರುದ್ರÀ್ರ ಹೋಮ, ರುದ್ರಾಭಿಷೇಕ ನಡೆಯಲಿದೆ. ಸಂಜೆ 4.30ಕ್ಕೆ ಶ್ರೀ ಉಮಾಮಹೇಶ್ವರ ದೇವರ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಠಿಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗುವುದು.
* ತಾಲೂಕಿನ ಪುಷ್ಪಗಿರಿ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಪೂಜಾ ಕಾರ್ಯಗಳು ನಡೆಯಲಿರುವುದಾಗಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ. 20 ರಂದು ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ತಾ 21 ರಂದು ಬೆಳಿಗ್ಗೆ ಶ್ರೀ ಶಾಂತಮಲ್ಲಿಕಾರ್ಜುನ ದೇವರಿಗೆ ಮಹಾರುದ್ರಾಭಿಷೇಕ, ರುದ್ರಹೋಮ ಮತ್ತು ವನದುರ್ಗಾದೇವಿ ಪೂಜೆ ನಡೆಸಲಾಗುವುದು. ರಾತ್ರಿ ವಿಶೇಷ ಪೂಜೆಗಳು ನಡೆಯುವುದು.
ತಾ. 22ರಂದು ರುದ್ರಾಭಿಷೇಕ, ಅರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯವುದು. ಮೂರು ದಿನಗಳು ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯುವುದು.
* ಟಿ. ಶೆಟ್ಟಿಗೇರಿಯ ಶ್ರೀ ಸಿದ್ದಾಶ್ರಮದಲ್ಲಿ ಶಿವರಾತ್ರಿ ಪ್ರಯುಕ್ತ ತಾ. 21 ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ನಿತ್ಯಪೂಜೆ, 8 ಗಂಟೆಯಿಂದ 8.30 ರವರೆಗೆ ಪಂಚಾಕ್ಷರಿ ಭಜನೆ, 9 ರಿಂದ 10 ಗಂಟೆಯವರೆಗೆ ಶ್ರೀ ಮಹಾಗಣಪತಿ ಹೋಮ, 10 ರಿಂದ 11 ಗಂಟೆಯವರೆಗೆ ಶಿವಲಿಂಗಕ್ಕೆ ಬಿಲ್ವರ್ಚನೆ ಮತ್ತು ಪಂಚಾಮೃತ ರುದ್ರಾಭಿಷೇಕ, ಪ್ರಾರ್ಥನೆ, ಭಜನೆ, 11.30 ರಿಂದ ಗೋಣಿಕೊಪ್ಪಲಿನ ಭಗವಾನ್ ಶ್ರೀ ಸತ್ಯಸಾಯಿ ಬಾಬ ಭಕ್ತವೃಂದದವರಿಂದ ಭಜನೆ ಮತ್ತು ಸಂಕೀರ್ತನೆ, 12.30 ಕ್ಕೆ ಮಹಾಮಂಗಳಾರತಿ, 1 ಗಂಟೆಗೆ ಅನ್ನಸಂತರ್ಪಣೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
* ಮಹಾಶಿವರಾತ್ರಿ ಅಂಗವಾಗಿ ಕುಶಾಲನಗರದ ವಿವಿಧೆಡೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ತಾ. 21 ರಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 6 ರಿಂದ ಬಿಲ್ವಾರ್ಚನೆ, 8 ಗಂಟೆಗೆ ಮಹಾಮಂಗಳಾರತಿ ನಂತರ ಅಭಿಷೇಕ, ರಾತ್ರಿಯಿಂದ ಬೆಳಗಿನ ತನಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ರುದ್ರಾಭಿಷೇಕ ಮಾಡಿಸುವವರು ತಾ. 20 ರ ಸಂಯೊಳಗೆ ಹೆಸರು ನೋಂದಾಯಿಸುವಂತೆ ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.
ಕುಶಾಲನಗರ ಪಟ್ಟಣದಲ್ಲಿ ಮಹಾ ಶಿವರಾತ್ರಿ ಆಚರಣಾ ಸಮಿತಿ ವತಿಯಿಂದ 3ನೇ ವರ್ಷದ ಮಹಾ ಶಿವರಾತ್ರಿ ಕಾರ್ಯಕ್ರಮ ತಾ. 21 ರಂದು ಸಂಜೆ 6 ಗಂಟೆಯಿಂದ 1 ಗಂಟೆವರೆಗೆ ನಡೆಯಲಿದೆ. ಕುಶಾಲನಗರ ಗಣಪತಿ ದೇವಾಲಯ ಬಳಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜೆ ಶಾಸ್ತ್ರೀಯ ನೃತ್ಯ ಪ್ರಕಾರಗಳ ಸ್ಪರ್ಧೆ ಹಮ್ಮಿಕೊಂಡಿದ್ದು ವಿಜೇತರಿಗೆ ನಗದು ಮತ್ತು ಟ್ರೋಫಿ ವಿತರಿಸಲಾಗುವುದು ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.
ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 18ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ತಾ. 21 ರಂದು ಸಂಜೆ 7 ಗಂಟೆಗೆ ನೆರವೇರಲಿದೆ ಎಂದು ಟ್ರಸ್ಟ್‍ನ ಆಡಳಿತ ಮಂಡಳಿ ತಿಳಿಸಿದೆ.