ಮೂರ್ನಾಡು, ಫೆ. 18: ಭಾರತೀಯ ಜನತಾ ಪಕ್ಷದ ಸ್ಥಾನೀಯ ಸಮಿತಿ ಮತ್ತು ಬೂತ್ ಕಾರ್ಯಕರ್ತರ ಸಭೆ ತಾ. 14 ರಂದು ಬೆಳಿಗ್ಗೆ 11 ಗಂಟೆಗೆ ಸ್ಥಾನೀಯ ಸಮಿತಿಯ ಅಧ್ಯಕ್ಷ ಪಳಂಗಂಡ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ನಿಂದ ಮೂರ್ನಾಡು ವಲಯ ಅಧ್ಯಕ್ಷ ಪುದಿಯೊಕ್ಕಡ ಪೊನ್ನು ಮುತ್ತಪ್ಪ, ಮೂರ್ನಾಡು ವಲಯದ ಜೆಡಿಎಸ್ನ ಮಾಜಿ ಅಧ್ಯಕ್ಷ ಕೆರೆಮನೆ ಭರತ್, ಪಂಚಾಯಿತಿ ಸದಸ್ಯರಾದ ಈರಾ ಸುಬ್ಬಯ್ಯ, ಪುದಿಯೊಕ್ಕಡ ತಂಗಚ್ಚಿ ಬೆಳ್ಳಿಯವ್ವ, ಪಾರೆಮಜಲು ರಾಜೇಶ್, ಪುದಿಯೊಕ್ಕಡ ವಿಪಿನ್ ಸೋಮಯ್ಯ, ಕಂಬೀರಂಡ ಉಮೇಶ್, ಕಂಬೀರಂಡ ಯೋಗೀಶ್, ಚೀಯಂಡಿರ ಪ್ರದೀಪ್, ಮೇರ್ಕಜ್ಜಿ ಶಿವಯ್ಯ, ಬಡುವಂಡ ಕಿರಣ್ ಚಂಗಪ್ಪ, ಮುಕ್ಕಾಟಿರ ರವಿಕುಮಾರ್, ಮೇರ್ಕಜ್ಜಿ ಲೋಹಿತ್ ಸೋಮಯ್ಯ ಹಾಗೂ ಐವತ್ತಕ್ಕೂ ಹೆಚ್ಚಿನ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿ.ಜೆ.ಪಿ. ಸೇರ್ಪಡೆ ಗೊಂಡರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದು ಕೋಟಿ ಎಂಬತ್ತಮೂರು ಲಕ್ಷದ ವಿವಿಧ ಅನುದಾನವನ್ನು ನೀಡಿರುವದಾಗಿ ತಿಳಿಸಿದರು. ಪಕ್ಷಕ್ಕೆ ಹೊಸದಾಗಿ ಸೇರಿರುವ ಕಾರ್ಯಕರ್ತರನ್ನು ಸ್ವಾಗತಿಸುತ್ತಾ, ಎಲ್ಲ ಕಾರ್ಯಕರ್ತರು ಪಕ್ಷದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕೇಳಿಕೊಂಡರು. ವೇದಿಕೆಯಲ್ಲಿ ಪ್ರಮುಖರಾದ ಬೆಲ್ಲು ಸೋಮಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ಜಿಲ್ಲಾ ಪಂಚಾಯಿತಿಯ ಸದಸ್ಯರಾದ ಕಲಾವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನಾ, ಉಪಾಧ್ಯಕ್ಷ ಪೋತಂಡ ಗಣಪತಿ, ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ಪೆಮ್ಮಂಡ ಗೀತಾ ಪವಿತ್ರ, ಆರ್ಎಸ್ಎಸ್ನ ಪ್ರಮುಖರಾದ ಶ್ಯಾಮ್ ಪ್ರಸಾದ್, ಪುದಿಯೊಕ್ಕಡ ರಮೇಶ್, ಗ್ರಾಮ ಪಂಚಾಯಿತಿಯ ಬಿಜೆಪಿಯ ಸದಸ್ಯರು, ಸ್ಥಾನೀಯ ಸಮಿತಿಯ ಸದಸ್ಯರು, ಬೂತ್ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಹಾಜರಿದ್ದರು.