ಸೋಮವಾರಪೇಟೆ, ಫೆ. 18: ತಾಲೂಕಿನ ಅರಸಿನಕುಪ್ಪೆ-ಸಿದ್ಧಲಿಂಗಪುರ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ತಾ. 21 ರಿಂದ 22 ರವರೆಗೆ ಮಹಾಶಿವರಾತ್ರಿ ಜಾತ್ರೋತ್ಸವ ನಡೆಯಲಿದೆ ಎಂದು ದೇವಾಲಯದ ರಾಜೇಶ್‍ನಾಥ್‍ಜೀ ತಿಳಿಸಿದ್ದಾರೆ.
ಜಾತ್ರೋತ್ಸವದ ಅಂಗವಾಗಿ ಶ್ರೀ ಮಂಜುನಾಥ ದೇವರಿಗೆ 1108 ಎಳನೀರು ಅಭಿಷೇಕ, ಮಹಾಗಣಪತಿ ಹೋಮ, ಅಷ್ಟಯಾಮ ಪೂಜೆ, ರುದ್ರಹೋಮ, ತೀರ್ಥಸ್ನಾನ ಸೇರಿದಂತೆ ಅನ್ನಸಂತರ್ಪಣೆ ನಡೆಯಲಿದೆ.
ತಾ. 21 ರಿಂದ ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, 6 ರಿಂದ ಕ್ಷೀರಾಭಿಷೇಕ, 9 ರಿಂದ ಎಳನೀರು ಅಭಿಷೇಕ, ಮಧ್ಯಾಹ್ನ 12 ಗಂಟೆಯಿಂದ ಕಬ್ಬಿನ ಹಾಲಿನ ಅಭಿಷೇಕ, 3ರಿಂದ ಕಳಶಾಭಿಷೇಕ, 6 ಗಂಟೆಯಿಂದ ಪಂಚಾಮೃತ ಅಭಿಷೇಕ, ರಾತ್ರಿ 9 ರಿಂದ ಕಳಶಾಭಿಷೇಕ, ಮಧ್ಯರಾತ್ರಿ 12 ಗಂಟೆಯಿಂದ ಜೇನುತುಪ್ಪ ಅಭಿಷೇಕ, ತಾ. 22ರ ನಸುಕಿನ 3 ಗಂಟೆಗೆ ಭಸ್ಮಾಭಿಷೇಕ, ಬೆಳಗ್ಗೆ 6.30ಕ್ಕೆ ರುದ್ರಹೋಮ, 8ಕ್ಕೆ ಪೂರ್ಣಾಹುತಿ, ಮಹಾಪೂಜೆ, ಮಹಾಮಂಗಳಾರತಿ, 8 ಗಂಟೆಗೆ ತೀರ್ಥ ಸ್ನಾನ ನಡೆಯಲಿದೆ.
ಇದರೊಂದಿಗೆ ತಾ. 21 ಮತ್ತು 22 ರಂದು ಭಜನಾ ಕಾರ್ಯಕ್ರಮ ದೇವಾಲಯದಲ್ಲಿ ನಡೆಯಲಿದ್ದು, ತಾ. 22 ರಂದು ಮದ್ಯಾಹ್ನ 12.30ಕ್ಕೆ ನೈವೇದ್ಯ, ಮಹಾಪೂಜೆಯ ನಂತರ ಅನ್ನಸಂತರ್ಪಣೆ ಜರುಗಲಿದೆ. ಅಭಿಷೇಕಕ್ಕೆ ಹಾಲು, ತುಪ್ಪ, ಜೇನು, ಎಳನೀರು ನೀಡುವವರು ತಾ. 21 ರಂದು ಬೆಳಿಗ್ಗೆ 10 ಗಂಟೆಯ ಒಳಗೆ ದೇವಾಲಯಕ್ಕೆ ತಲುಪಿಸಬೇಕು. ಪೂಜಾ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊ: 9740150620 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ರಾಜೇಶ್‍ನಾಥ್‍ಜೀ ತಿಳಿಸಿದ್ದಾರೆ.