ಶ್ರೀಮಂಗಲ, ಫೆ. 18 : ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ಸ್ನಾನಕ್ಕೆ ಕೆರೆಗೆ ಇಳಿದು ಸಾವನ್ನಪ್ಪಿದ್ದ ಇಬ್ಬರು ಕಾರ್ಮಿಕರ ಮೃತ ದೇಹವನ್ನು ಮಂಗಳವಾರ ಪತ್ತೆ ಮಾಡಿದ್ದು, ಮುಳುಗು ತಜ್ಞ ಕೆರೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿ ದ್ದಾರೆ.

ತೆರಾಲು ಗ್ರಾಮದ ಬೆಳೆಗಾರ ಬೊಳ್ಳೇರ ಪೊನ್ನಪ್ಪ ಅವರ ಕೆರೆಯಲ್ಲಿ ಕಾಫಿ ಕೆಲಸಕ್ಕೆ ಬಂದಿದ್ದ ಈಶಾನ್ಯ ರಾಜ್ಯದ ಕಾರ್ಮಿಕ ವಿವಾಹಿತ ವಿನೋದ್ (22) ಸೋಮವಾರ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಮುಳುಗುತ್ತಿದ್ದ. ಇದನ್ನು ಗಮನಿಸಿದ ಮತ್ತೊರ್ವ ಕಾರ್ಮಿಕ ಹುಣಸೂರು ವೀರನಹೊಸಹಳ್ಳಿಯ ಪುಟ್ಟ (22) ವಿನೋದ್‍ನನ್ನು ರಕ್ಷಿಸಲು ಕೆರೆಗೆ ಜಿಗಿದಿದ್ದು; ಈ ಸಂದರ್ಭ ಇಬ್ಬರೂ ನೀರು ಪಾಲಾಗಿದ್ದರು.

ಸೋಮವಾರ ಮುಳುಗಿರುವ ಇಬ್ಬರನ್ನು ಹೊರತೆಗೆಯಲು ನಡೆಸಿದ ಪ್ರಯತ್ನ ಫಲಕೊಡಲಿಲ್ಲ. ಆದ್ದರಿಂದ ಮಂಗಳವಾರ ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ನೆಮ್ಮಲೆ ಗ್ರಾಮದ ಮುಳುಗು ತಜ್ಞ ಮಾರಿಮುತ್ತು ಅವರ ನೆರವಿನಿಂದ ಇಬ್ಬರ ಮೃತದೇಹವನ್ನು ಪೊಲೀಸರ ಸಮ್ಮುಖದಲ್ಲಿ ಹೊರತೆಗೆಯಲಾಗಿದೆ. ಈಶಾನ್ಯ ರಾಜ್ಯದ ವಿನೋದ್ ಅವರ ತಂದೆ-ತಾಯಿ ತೆರಾಲು ಗ್ರಾಮ ದಲ್ಲಿಯೇ ಇರುವುದರಿಂದ ಈ ಗ್ರಾಮ ದಲ್ಲಿಯೇ ವಿನೋದ್‍ನ ಅಂತ್ಯಸಂಸ್ಕಾರ ನಡೆಸಲು ಮರಣೋತ್ತರ ಪರೀಕ್ಷೆ ನಡೆಸಿ ಹಸ್ತಾಂತರಿಸಲಾಯಿತು. ಮತ್ತೋರ್ವ ಪುಟ್ಟ ಎಂಬಾತನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವೀರನಹೊಸಹಳ್ಳಿ ಯಿಂದ ಬಂದಿದ್ದ ಸಂಬಂಧಿಕರಿಗೆ ಹಸ್ತಾಂತರಿ¸ Àಲಾಯಿತು. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.