ಗುಡ್ಡೆಹೊಸೂರು, ಫೆ. 17: ಗುಡ್ಡೆಹೊಸೂರು ಗ್ರಾ.ಪಂ. ಮತ್ತು ಅರಣ್ಯ ಇಲಾಖಾ ಜಂಟಿ ಆಶ್ರಯದಲ್ಲಿ ಆನೆಕಾಡು ಬಳಿಯ ರಾಜ್ಯ ಹೆದ್ದಾರಿ ಬಳಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಆನೆಕಾಡು ಬಳಿಯ ಮರದ ಡಿಪೋ ಬಳಿಯಿಂದ 7ನೇ ಹೊಸಕೋಟೆಯ ಗ್ರಾ.ಪಂ. ವ್ಯಾಪ್ತಿಯ ತನಕ ರಸ್ತೆಯ ಎರಡು ಬದಿಯಲ್ಲಿದ್ದ ಪ್ಲಾಸ್ಟಿಕ್ ಬಾಟಲ್ ಮತ್ತು ನಿರುಪಯೋಗಿ ವಸ್ತುಗಳನ್ನು ಸಂಗ್ರಹಿಸಲಾಯಿತು. ಗುಡ್ಡೆಹೊಸೂರಿನ ಕಸ ಸಾಗಿಸುವ ಟ್ರ್ಯಾಕ್ಟರ್‍ನಲ್ಲಿ ತುಂಬಿ ಬೇರೆಡೆಗೆ ಸಾಗಿಸಲಾಯಿತು.

ಅಲ್ಲದೆ ಕೋಳಿ ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ಈ ವಿಭಾಗದಲ್ಲಿ ಬೇರೆಡೆಗಳಿಂದ ತಂದು ಅರಣ್ಯ ದಂಚಿನಲ್ಲಿ ಸುರಿಯಲಾಗುತ್ತಿದೆ. ಸ್ವಚ್ಛತಾ ಕಾರ್ಯದಲ್ಲಿ ವಲಯ ಅರಣ್ಯಧಿಕಾರಿ ಅನನ್ಯ ಕುಮಾರ್, ಉಪವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜಾ, ಮಾದವನಾಯ್ಕ, ಆರ್.ಎಫ್.ಓ. ವಿನಿತಾ ಮತ್ತು ಕುಶಾಲನಗರದ ಅರಣ್ಯ ರಕ್ಷಕರ ತರಬೇತಿ ಕೇಂದ್ರದ ತರಬೇತಿದಾರರು ಭಾಗವಹಿಸಿದ್ದರು.

ಅಲ್ಲದೆ ಗುಡ್ಡೆಹೊಸೂರು, ಗ್ರಾ.ಪಂ. ಸಿಬ್ಬಂದಿಗಳಾದ ವಿಜಯ್, ನಂಜುಂಡ ಮುಂತಾದವರು ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ವಲಯ ಅರಣ್ಯಾಧಿಕಾರಿಯವರಾದ ಅನನ್ಯ ಕುಮಾರ್ ಬೇರೆಡೆಗಳಿಂದ ವಾಹನಗಳಲ್ಲಿ ತ್ಯಾಜ್ಯ ವಸ್ತುಗಳನ್ನು ತಂದು ಅರಣ್ಯದಂಚಿನ ರಸ್ತೆ ಬದಿಯಲ್ಲಿ ಸುರಿಯುವುದು ಕಂಡು ಬಂದಲ್ಲಿ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸ್ವಚ್ಛತೆ ಸಂದÀರ್ಭ ಸುಮಾರು ಲೋಡ್ ನಿರುಪಯೋಗಿ ವಸ್ತುಗಳನ್ನು ಸಂಗ್ರಹಿಸಲಾಯಿತು.