ಮಡಿಕೇರಿ, ಫೆ. 17: ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ 2019-20ನೇ ಸಾಲಿನ ತಾಲೂಕು ಪಂಚಾಯಿತಿ ಯೋಜನೆಯಡಿ ತೋಟಗಾರಿಕೆ ಉತ್ಪನ್ನಗಳ ಹಣ್ಣು ಮತ್ತು ತರಕಾರಿ ಸಂಸ್ಕರಣೆ ಬಗ್ಗೆ ರೈತ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ ನಾಪೋಕ್ಲುವಿನ ಮಹಿಳಾ ಸಮಾಜದಲ್ಲಿ ನಡೆಯಿತು.
ತರಬೇತಿ ಪಡೆದುಕೊಂಡು ಮಹಿಳೆಯರು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಲ್ಲಿ ಉದ್ಯೋಗ ಸೃಷ್ಠಿಯಾಗುತ್ತದೆ ಮತ್ತು ಆರ್ಥಿಕತೆ ಕೂಡ ಅಭಿವೃದ್ಧಿಪಡಿಸಬಹುದು, ಇದರಿಂದ ಬೇರೆಯವರಿಗೂ ಕೂಡ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದರು.
ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರದಿಂದ ಅನೇಕ ಯೋಜನೆ ಗಳನ್ನು ಜಾರಿಗೆ ತರುತಿದ್ದರೂ ಜನರು ಉಪಯೋಗಿಸಿಕೊಳ್ಳುತ್ತಿಲ್ಲ, ಇಂತಹ ಸಂದರ್ಭದಲ್ಲಿ ಮಹಿಳಾ ಸಮಾಜದವರು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಿ ಇವರನ್ನು ಮುಖ್ಯವಾಹಿನಿಗೆ ತರಬೇಕು ಎಂದು ನಾಪೋಕ್ಲು ಮಹಿಳಾ ಸಮಾಜದ ಅಧ್ಯಕ್ಷೆ ಶೈಲ ಬೋಪಯ್ಯ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ತೋಟಗಾರಿಕಾ ಅಧಿಕಾರಿ ಎಸ್.ವಿ. ರಾಮದಾಸ್, ಮಹಿಳೆಯರು ಮನೆಯಲ್ಲಿ ಉಪಯೋಗಿಸಿ ಮತ್ತು ತುಂಬಾ ಹಾಳಾದ ಹಣ್ಣು ತರಕಾರಿಗಳನ್ನು ಬಿಸಾಡದೆ ಸಂಸ್ಕರಿಸಿ ಮತ್ತು ಮಾರುಕಟ್ಟೆಯಿಂದ ಹಣ್ಣು ಮತ್ತು ತರಕಾರಿಗಳನ್ನು ಆಯ್ದು ತಂದು ತಮ್ಮ ತಮ್ಮ ಮನೆಗಳಲ್ಲಿಯೇ ಜಾಮ್, ಜೆಲ್ಲಿ ಜ್ಯೂಸ್, ಸಾಸ್, ಉಪ್ಪಿನಕಾಯಿ, ಮಾರ್ಮಲೇಡ್‍ಗಳಲ್ಲಿ ತಯಾರಿಸಿ ಕೊಂಡು ಆರೋಗ್ಯಕರವಾದ ಸಸ್ಯದಿಂದ ಆಹಾರವನ್ನು ಪಡೆಯಬಹುದು. ಇದರಿಂದ ಆರ್ಥಿಕ ಉಳಿತಾಯ ಮಾಡಬಹುದು ಎಂದು ಹೇಳಿದರಲ್ಲದೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಷಯ ಪರಿಣಿತರಾದ ಗೌರಮ್ಮನವರು ಪ್ರಾಯೋಗಿಕವಾಗಿ ಜಾಮ್, ಕೆಚಪ್, ಉಪ್ಪಿನಕಾಯಿಯನ್ನು ತಯಾರಿಸಿದಾಗ ಬ್ರೆಡ್ ಜೊತೆ ಜಾಮ್ ಮಿಕ್ಸ್ ಮಾಡಿಕೊಂಡು ತಿಂದು ರೈತ ಮಹಿಳೆಯರು ಸಂತಸಪಟ್ಟರು. ಮೂವೇರ ಧರಣಿ ಗಣಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಬಿದ್ದಾಟಂಡ ಮೇರಿ ನಾಣಯ್ಯ ಇತರರು ಇದ್ದರು.