ಗುಡ್ಡೆಹೊಸೂರು, ಫೆ. 17: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಸರ್ವೇ ನಂ 1/1 ರಲ್ಲಿ ಕಳೆದ 4 ವರ್ಷಗಳ ಹಿಂದೆ ಶಾಸಕರಾದ ಅಪ್ಪಚ್ಚು ರಂಜನ್ ಅವರ ಮೂಲಕ ಸುಮಾರು 25 ಮಂದಿಗೆ ನಿವೇಶನ ಹಕ್ಕು ಪತ್ರ ನೀಡಲಾಗಿತ್ತು. ಆದರೆ ಹಕ್ಕು ಪತ್ರ ಪಡೆದಿದ್ದ ಮನೆಯಿಲ್ಲದ ಮಂದಿಗೆ ಆ ಜಾಗದಲ್ಲಿ ಮನೆ ನಿರ್ಮಿಸಲು ಅರಣ್ಯ ಇಲಾಖೆಯಿಂದ ಮರ ತೆರವುಗೊಳಿಸಲು ನಿರ್ಭಂದವಿತ್ತು. ಈ ವಿಚಾರವಾಗಿ ಆ ವಿಭಾಗದ ಸದಸ್ಯರು ಮತ್ತು ತಾ.ಪಂ. ಸದಸ್ಯರು ನಿರಂತರ ಹೋರಾಟ ನಡೆಸಿದ್ದರು. ಕಂದಾಯ ಇಲಾಖೆಯರಿಗೂ ಮತ್ತು ಅರಣ್ಯ ಇಲಾಖೆಯವರ ಮೂಲಕ ನಿರಂತರ ಹೋರಾಟ ನಡೆಸಲಾಗಿತ್ತು.

ಜ.23 ರಂದು ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರ ಕಚೇರಿಯಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯ ನಡಾವಳಿ ಪ್ರಕಾರ ಸ್ಥಳೀಯ ಗ್ರಾಮ ಪಂಚಾಯ್ತಿಯವರು ಸರ್ವೇ ನಂ.1/1 ಜಾಗದ ನೀಲಿ ನಕ್ಷೆಯನ್ನು ನೀಡುವಂvಯೂ ಆದೇಶ ನೀಡಲಾಗಿದೆ. ಅಲ್ಲದೆ ಮನೆ ನಿರ್ಮಾಣವಾಗಬೇಕಿರುವ ಜಾಗದಲ್ಲಿರುವ ಮರಗಳನ್ನು ಗುರುತಿಸಿಕೊಡುವಂತೆ ಅರಣ್ಯ ಇಲಾಖೆಯಿಂದ ಮೌಖಿಕವಾಗಿ ಮತ್ತು ಲಿಖಿತವಾದ ಆದೇಶ ನೀಡಲಾಗಿದೆ. ಇದೀಗ ಹಕ್ಕು ಪತ್ರ ಪಡೆದಿರುವ ಫಲಾನುಭವಿಗಳು ನಿಟ್ಟಿಸಿರು ಬಿಟ್ಟಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ವಿಭಾಗದ ತಾ,ಪಂ.ಸದಸ್ಯೆ ಪುಷ್ಪ ಮತ್ತು ಗ್ರಾ.ಮ.ಸದಸ್ಯೆ ಡಾಟಿಯವರು ನಿರಂತರ ಹೋರಾಟ ನಡೆಸಿದ್ದರು ಈ ವಿಷಯಕ್ಕೆ ಸಂಬಂಧಿಸಿದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು ಅವರು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧಿಕಾರಿ ಶ್ಯಾಂ ತಮ್ಮಯ್ಯ ಅವರಿಗೂ ಮತ್ತು ಇಲ್ಲಿನ ಗ್ರಾ.ಪಂ. ಸದಸ್ಯೆ ಡಾಟಿಯವರಿಗೆ ಮಾಹಿತಿ ನೀಡಿದ್ದಾರೆ.