ಸೋಮವಾರಪೇಟೆಯ ಬಸವೇಶ್ವರ ರಸ್ತೆ ನಿವಾಸಿ ದಿ. ಡಿ.ಸಿ. ಜಯರಾಮ್ ಅವರ ಪತ್ನಿ ವಸಂತಿ (82) ತಾ. 17 ರಂದು ಸೋಮವಾರ ನಿಧನರಾದರು.ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. 18 ರಂದು (ಇಂದು) ಕರ್ಕಳ್ಳಿಯಲ್ಲಿ ನಡೆಯಲಿದೆ.

ಟ ಹೆಬ್ಬಾಲೆ ಬಾಣವಾರ ರಸ್ತೆಯ ಕೊಪ್ಪಲು ಬಡಾವಣೆ ನಿವಾಸಿ ಗ್ರಾ.ಪಂ. ಮಾಜಿ ಸದಸ್ಯ, ಜ್ಯೋತಿ ಆಟ್ರ್ಸ್ ವ್ಯವಸ್ಥಾಪಕ ಹೆಚ್.ಹೆಚ್. ಗುರುಲಿಂಗಪ್ಪ (48) ತಾ. 16 ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ಸೇರಿದಂತೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಟ ಮಾಜಿ ಸೈನಿಕ ಹಾಗೂ ನಿವೃತ್ತ ಶಿಕ್ಷಕ ಹೊಟ್ಟೇಂಗಡ ಎಂ. ಜನಕ (74) ಅವರು ತಾ. 16 ರಂದು ಹುದಿಕೇರಿ ಬಳಿಯ ಹೈಸೊಡ್ಲೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಟ ಶ್ರೀಮಂಗಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ, ಶ್ರೀಮಂಗಲ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಹಿರಿಯ ಸಮಾಜ ಸೇವಕಿ ಮಚ್ಚಮಾಡ ಗೌರಮ್ಮ (79) ಅವರು ತಾ. 17 ರಂದು ನಿಧನರಾದರು. ಮಚ್ಚಮಾಡ ದಿ. ತಿಮ್ಮಯ್ಯ ಅವರ ಧರ್ಮಪತ್ನಿಯಾಗಿದ್ದ ಇವರು ಪುತ್ರ ವಕೀಲ ಎಂ.ಟಿ. ಕಾರ್ಯಪ್ಪ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. 18 ರಂದು (ಇಂದು) ನಡೆಯಲಿದೆ.