ಮಡಿಕೇರಿ, ಫೆ. 16: ಮೈಸೂರಿನಲ್ಲಿ ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋ ರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಸಂಸ್ಥೆಯು ದೇಶದ ಪ್ಲಾಸ್ಟಿಕ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡಲಾಗುತ್ತಿದೆ. 2020-21 ನೇ ಸಾಲಿನ ಡಿಪ್ಲೋಮಾ ಮತ್ತು ಪೋಸ್ಟ್ ಡಿಪ್ಲೋಮಾ ಪ್ರವೇಶಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮೇ 22 ಕೊನೆಯ ದಿನ. ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ (ಡಿ.ಪಿ.ಟಿ) 3 ವರ್ಷ, ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ (ಡಿಪಿಎಮ್‍ಟಿ) 3 ವರ್ಷ ಮತ್ತು ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಪ್ರೊಸೆಸಿಂಗ್ ಮತ್ತು ಟೆಸ್ಟಿಂಗ್ (ಪಿಜಿಡಿ-ಪಿಪಿಟಿ)- 2 ವರ್ಷ ಕೋರ್ಸ್‍ಗಳಿಗೆ ಎಸ್‍ಎಸ್ ಎಲ್‍ಸಿ, ಪಿಯುಸಿ (ವಿಜ್ಞಾನ) ಮತ್ತು ಬಿ.ಎಸ್.ಸ್ಸಿ (ರಾಸಾಯನ) ಪರೀಕ್ಷೆಯಲ್ಲಿ ತೇರ್ಗಡೆಯಾದವರು/ ಹಾಜರಾದವರು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ hಣಣಠಿ://eಚಿಜmissioಟಿ.ಛಿiಠಿeಣ.gov.iಟಿ ಅಥವಾ ದೂ. 0821-2510618/ 9480253024/9141075968 ನ್ನು ಸಂಪರ್ಕಿಸಬಹುದು ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು ಮತ್ತು ಮುಖ್ಯಸ್ಥ ಆರ್.ಟಿ. ನಾಗರಳ್ಳಿ ತಿಳಿಸಿದ್ದಾರೆ.

ಫೆಲೋಶಿಪ್‍ಗೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷ ಕೊಡವ ಸಂಸ್ಕøತಿ, ಆಚಾರ, ವಿಚಾರ ಕಲೆ ಜಾನಪದ ಹಾಗೂ ಇತರ ಕೊಡಗಿಗೆ ಸಂಬಂಧಿಸಿದ ವಿಷಯದ ಕುರಿತಾದ ಸಂಶೋಧನಾತ್ಮಕ ಪುಸ್ತಕಗಳನ್ನು ಫೆಲೋಶಿಪ್ ಕೊಡುವ ಮೂಲಕ ಹೊರತರುತಿದ್ದು, ಈ ಬಾರಿಯೂ ಈ ನಿಟ್ಟಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ನಾಲ್ವರು ವಿದ್ವಾಂಸರಿಗೆ ತಲಾ ರೂ. 75 ಸಾವಿರ ದಂತೆ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಸ್ನಾತಕೋತ್ತರ ಪದವೀಧರರು ಫೆಲೋಶಿಫ್‍ಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಫೆಲೋಶಿಪ್ ನೀಡಲಾಗುವುದು. ಫೆಲೋಶಿಫ್‍ಗಾಗಿ ಆಯ್ಕೆಯಾದವರು ಕೊಡವ ಸಾಹಿತ್ಯ ಅಕಾಡೆಮಿಯ ನೀತಿ ನಿಯಮಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸಬೇಕಿದೆ. ಅರ್ಜಿ ಸಲ್ಲಿಸಲು ತಾ. 28 ಕೊನೆ ದಿನವಾಗಿದೆ.

ಹೆಚ್ಚಿನ ಮಾಹಿತಿಗೆ ರಿಜಿಸ್ಟ್ರಾರ್ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸ್ಕೌಟ್ಸ್ ಭವನ, ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿ, ಮಡಿಕೇರಿ ದೂರವಾಣಿ 08272-229074ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.

ಪುಸ್ತಕ ಬಹುಮಾನಕ್ಕೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಲೇಖಕರು ಅಥವಾ ಪ್ರಕಾಶಕರು ಸಲ್ಲಿಸಬಹುದಾಗಿದೆ. 2019ರ ಜನವರಿ 1 ರಿಂದ 2019ರ ಡಿಸೆಂಬರ್ 31 ರ ನಡುವೆ ಪ್ರಕಟಗೊಂಡ ಪುಸ್ತಕಗಳನ್ನು 2019ರ ಸಾಲಿನ ಪುಸ್ತಕ ಬಹುಮಾನಕ್ಕೆ ಪರಿಗಣಿಸಲಾಗುವುದು. ಕೊಡವ ಕವನ ಸಂಕಲನ, ಕೊಡವ ಕಥಾ ಸಂಕಲನ, ಕೊಡವ ಕಾದಂಬರಿ, ಕೊಡವ ಕಾವ್ಯ, ಕೊಡವ ನಾಟಕ, ಕೊಡವ ಭಾಷೆ ಮತ್ತು ಸಂಸ್ಕøತಿಯ ಬಗ್ಗೆ ಅಧ್ಯಯನ ಗ್ರಂಥ ಹಾಗೂ ಕೊಡವ ಭಾಷೆಯಿಂದ ಇತರ ಭಾಷೆ ಅಥವಾ ಅನ್ಯ ಭಾಷೆಯಿಂದ ಕೊಡವ ಭಾಷೆಗೆ ಭಾಷಾಂತರಿತ ಕೃತಿಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದು. ಅಕಾಡೆಮಿಯು ಹೆಚ್ಚು ಸಂಖ್ಯೆಯಲ್ಲಿ ಸ್ವೀಕರಿಸುವ ಪುಸ್ತಕಗಳ 3 ಪ್ರಕಾರಗಳನ್ನು ಮಾತ್ರ ಪುಸ್ತಕ ಬಹುಮಾನಕ್ಕೆ ಪರಿಗಣಿಸಲಾಗುವುದು. ಪುಸ್ತಕಗಳ ತಲಾ 4 ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ಕೊಡವ ಅಕಾಡೆಮಿ ಪುಸ್ತಕ ಬಹುಮಾನ ಯೋಜನೆ-2019 ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಸ್ಕೌಟ್ಸ್ ಭವನ, ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿ ಮಡಿಕೇರಿ-571201 ದೂ. 08272-229074 ಈ ವಿಳಾಸಕ್ಕೆ ತಾ. 29 ರೊಳಗೆ ಸಲ್ಲಿಸುವಂತೆ ಅಕಾಡೆಮಿ ರಿಜಿಸ್ಟ್ರಾರ್ ಎ.ಸಿ. ಗಿರೀಶ್ ತಿಳಿಸಿದ್ದಾರೆ.

ಗೌರವ ಪ್ರಶಸ್ತಿಗೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊಡವ ಸಾಹಿತ್ಯ ಕ್ಷೇತ್ರ, ಕೊಡವ ಸಂಶೋಧನ ಕ್ಷೇತ್ರ, ಕೊಡವ ಕಲಾ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರನ್ನು 2019ರ ಸಾಲಿನ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರತಿಯೊಂದು ಕ್ಷೇತ್ರಕ್ಕೆ ಒಬ್ಬರಂತೆ 3 ಜನ ಸಾಧಕರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಅರ್ಜಿಯನ್ನು ಸ್ವತಃ ಸಾಧಕರೇ ಸಲ್ಲಿಸಬಹುದು ಅಥವಾ ಸಾಧಕರ ಅಭಿಮಾನಿಗಳು ಶಿಫಾರಸ್ಸು ಮಾಡಿ ಅರ್ಜಿ ಸಲ್ಲಿಸಬಹುದು.

ಹಿಂದಿನ ಸಾಲಿನಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿರುವ ಆದರೆ ಪ್ರಶಸ್ತಿಗೆ ಆಯ್ಕೆ ಆಗದಿರುವ ಸಾಧಕರ ಅರ್ಜಿಯನ್ನು ಈ ವರ್ಷವೂ ಪರಿಗಣಿಸಲಾಗುವುದು. ಅವರು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಆದರೆ ಸಾಧನೆಯ ಪೂರಕ ವಿವರಗಳಿದ್ದಲ್ಲಿ ಅಕಾಡೆಮಿಗೆ ಕಳುಹಿಸಿಕೊಡಬಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯದ ಎಲ್ಲಾ ಮಾಹಿತಿಗಳನ್ನು ಕಳುಹಿಸಬೇಕು. ಅರ್ಜಿಯನ್ನು ಭಾವಚಿತ್ರ ಹಾಗೂ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಅಕಾಡೆಮಿಗೆ ಕಳುಹಿಸಿಕೊಡಬಹುದು.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ಕೊಡವ ಅಕಾಡೆಮಿ ಗೌರವ ಪ್ರಶಸ್ತಿ-2019 ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಸ್ಕೌಟ್ ಭವನ, ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿ, ಮಡಿಕೇರಿ-571201 ದೂ. 08272-229074 ಈ ವಿಳಾಸಕ್ಕೆ ತಾ. 29 ರೊಳಗೆ ಸಲ್ಲಿಸುವಂತೆ ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.