ಗೋಣಿಕೊಪ್ಪಲು, ಫೆ. 16: ಕಾಲೇಜು ಪದವಿ ವಿದ್ಯಾರ್ಥಿಗಳಲ್ಲಿ ಉದ್ಯೋಗ ಆಯ್ಕೆ ಬಗ್ಗೆ, ಸಂದರ್ಶನ ಎದುರಿಸುವ ಬಗ್ಗೆ, ಗುಂಪು ಚರ್ಚೆ, ನಾಯಕತ್ವ ಗುಣ, ಕಂಪೆನಿಗಳಲ್ಲಿ ಸವಾಲುಗಳನ್ನು ಎದುರಿಸುವ ಬಗ್ಗೆ ಮತ್ತು ಕಾರ್ಯಕ್ಷಮತೆ ವೃದ್ಧಿಯ ಕುರಿತಂತೆ ಉದ್ಯೋಗ ಮತ್ತು ಉದ್ಯಮ ಶೀಲತಾ ತರಬೇತಿ ಕಾರ್ಯಾಗಾರವನ್ನು ಗೋಣಿ ಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದು, ವೀರಾಜಪೇಟೆ ಕಾವೇರಿ ಪದವಿ ಕಾಲೇಜು ಹಾಗೂ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಅಂತಿಮ ಪದವಿಯ ಸುಮಾರು 590 ವಿದ್ಯಾರ್ಥಿಗಳು ಪಾಲ್ಗೊಂಡರು.

‘ಕೂರ್ಗ್ ಟೀಚ್ ಟೂ ಫಿಶ್ ಟ್ರಸ್ಟ್’ ಮತ್ತು ಕಾವೇರಿ ವಿದ್ಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸುಮಾರು 5 ಪ್ರತಿಷ್ಠಿತ ಕಂಪೆನಿಗಳ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸೂಕ್ತ ಮಾಹಿತಿಯನ್ನು ಒದಗಿಸಿದರು. ಎರಡು ದಿನಗಳ ಕಾರ್ಯಾಗಾರದಲ್ಲಿ ಸುಮಾರು 590 ವಿದ್ಯಾರ್ಥಿಗಳಲ್ಲಿ ಪ್ರತಿಭಾನ್ವಿತ 120 ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು ಮುಂದಿನ ಏಪ್ರಿಲ್ ತಿಂಗಳಿನಲ್ಲಿ 8ಕ್ಕೂ ಅಧಿಕ ಕಂಪೆನಿಗಳಲ್ಲಿ ಉದ್ಯೋಗ ಕಲ್ಪಿಸುವ ಸಲುವಾಗಿ ಸಂದರ್ಶನಕ್ಕೆ ಕರೆಯಲಾಗುವದು ಎಂದು ಟ್ರಸ್ಟ್ ವ್ಯವಸ್ಥಾಪಕರಾದ ಶರತ್‍ನಾರು ತಿಳಿಸಿದ್ದಾರೆ.

ಇದೇ ಸಂದರ್ಭ ಟ್ರಸ್ಟ್ ಸದಸ್ಯ ಬ್ರಿಗೇಡಿಯರ್ ಎಂ.ಎ.ದೇವಯ್ಯ ಅವರು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.

ಎರಡು ದಿನಗಳ ಕಾರ್ಯಾಗಾರ ದಲ್ಲಿ ತಾಜ್, ಟೀಮ್ ಲೀಸ್, ಮುತ್ತೋಟ್ ಫೈನಾನ್ಸ್, ಮಲ್ಟಿ ಪ್ರಾಪರ್ಟಿ, ಟಾಟಾ ಸ್ಟ್ರೈವ್, ಇಕ್ವಿಟಾಸ್ ಬ್ಯಾಂಕ್, ಎ.ವಿ.ಟಿ ಕಂಪೆನಿಗಳ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಿದರು. ಬೆಂಗಳೂರಿನ ತಾಜ್ ಪ್ರತಿಭಾನ್ವೇಷಣೆ ವ್ಯವಸ್ಥಾಪಕಿ ಶ್ವೇತಾ ಮಿಶ್ರಾ, ಮಡಿಕೇರಿ ತಾಜ್‍ನ ಸತ್ಯ ನಾರಾಯಣ, ಮಲ್ಟಿ ಪ್ರಾಪರ್ಟಿಯ ಯಾಸ್ಮಿನ್ ಪಾಲ್, ಟಾಟಾದ ಸೈಲಾಸ್ ಪ್ರವೀನ್ತ್, ಈಕ್ವಿಟಾಸ್‍ನ ನಾಗರಾಜ್ ಶೆಟ್ಟಿ,ಉದಯ್, ಎವಿಟಿಯ ಪೆÇನ್ನಪ್ಪ, ಟೀಮ್ ಲೀಸ್‍ನ ಮಂಜುಳಾ ಕುಮಾರ್, ಸಂಪತ್ ಕುಮಾರ್, ಮುತ್ತೋಟ್ ಫೈನಾನ್ಸ್‍ನ ವಿಜಯಕುಮಾರ್ ಕೋರಟ್, ಲಿಬಿನ್ ಕೆ. ಆಂಟನಿ. ಸದೀಸ್ ವಿ.ಪಿ., ಜೋಹಾನ್ ಪಿಂಟೋ, ಟ್ರಸ್ಟಿ ಮಧು ಬೋಪಣ್ಣ ಮುಂತಾದವರು ಪಾಲ್ಗೊಂಡಿದ್ದರು.

ಕಾವೇರಿ ವಿದ್ಯಾ ಸಂಸ್ಥೆಯ ನೂತನ ಅಧ್ಯಕ್ಷರಾದ ಸಿ.ಕೆ.ಉತ್ತಪ್ಪ ಅವರು ವಿದ್ಯಾರ್ಥಿಗಳು ಕಾರ್ಯಾ ಗಾರದ ಪ್ರಯೋಜನ ಹೊಂದುವಂತೆ ಸಲಹೆ ನೀಡಿದರು. ಕಾವೇರಿ ಕಾಲೇಜಿನ ಪೆÇನ್ನಪ್ಪ ಎ.ಎಂ. ಮತ್ತು ಪಿ.ಎಂ. ಸೋಮಣ್ಣ ಮೇಲ್ವೀಚಾರಣೆ ವಹಿಸಿದ್ದರು.