ಸುಂಟಿಕೊಪ್ಪ, ಫೆ.16: ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಕರ್ನಾಟಕ ರಾಜ್ಯ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಸಮಾರೋಪ ಸಮಾರಂಭ ಶಾಲೆಯಲ್ಲಿ ನಡೆಸಲಾಗಿತ್ತು.
ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಮುಕ್ತಾಯ ಸಮಾರಂಭದಲ್ಲಿ ಶಾಲೆಯ ತಂಡವು ಸರ್ಕಾರಿ ಪ್ರೌಢಶಾಲೆ ಕಳೆದ ಸಾಲಿನಿಂದ ಆರಂಭಿಸಲಾಗಿದ್ದು ಇದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ, ವ್ಯಕ್ತಿಯ ವ್ಯಕ್ತಿತ್ವ ವಿಕಾಸನ, ಕಾನೂನಿನ ಬಗ್ಗೆ ಅರಿವು ಮೂಡಿಸುವ ದಿಸೆಯಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತಂಡಗಳ ರಚಿಸಲಾಗಿದೆ. ಇದರಿಂದ ಪ್ರೌಢ ಹಂತದಲ್ಲಿಯೇ ಕಾನೂನು ಪಾಲನೆಯ ಬಗ್ಗೆ ಮಾಹಿತಿ ತರಭೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ನಿಮ್ಮ ಕಣ್ಣಾ ಮುಂದೆ ನಡೆಯುವ ತಪ್ಪುಗಳನ್ನು ತಿದ್ದುವ ಕಾರ್ಯ ನಡೆಸಬೇಕೆಂದು ತರಬೇತುದಾರರು ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಬಾಲಕೃಷ್ಣ ವಹಿಸಿದ್ದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಕರ್ನಾಟಕ ರಾಜ್ಯ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತರಬೇತುದಾರ ಶಿವರಾಜ್ ಪೇದೆ, ಕೊಡಗು ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಟಿ.ಸೋಮಶೇಖರ್, ತಾಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ.ಧರ್ಮಪ್ಪ,ನೋಡಲ್ ಅಧಿಕಾರಿ ವೆಂಕಟೇಶ್, ಜೆಸಿಐ ಸಂಸ್ಥೆಯ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ಜಾಹಿದ್, ಸಹಶಿಕ್ಷಕಿಯರಾದ ಪುಷ್ಪಾ,ಶಾಂತ, ಚಿತ್ರಾ, ಜಯಶ್ರೀ,ಪವಿತ್ರ, ಮಂಜುಳ ಹಾಗೂ ಕರ್ನಾಟಕ ರಾಜ್ಯ ಸ್ಟೂಡೆಂಟ್ ಪೊಲೀಸ್ ಕೆಡೆಟ್ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಿಗೆ ಪ್ರಶಂಸನ ಪತ್ರಗಳನ್ನು ವಿತರಿಸಲಾಯಿತು.