ಮಡಿಕೇರಿ, ಫೆ. 16: ಪ್ರಧಾನಮಂತ್ರಿಯವರ ಫಿಟ್ ಇಂಡಿಯಾ ಪರಿಕಲ್ಪನೆಗೆ ಪೂರಕವಾಗಿ, ಆರೋಗ್ಯದ ಕಾಳಜಿ ಹೊಂದಲು ಅರಿವು ಮೂಡಿಸುವ ಸಲುವಾಗಿ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ದೈಹಿಕ ಶಿಕ್ಷಣ ವಿಭಾಗ, ಕೊಡಗು ಉಪನ್ಯಾಸಕರ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ವಿವಿಧ ಇಲಾಖೆ ನೌಕರರಿಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಚಾಲನೆ ನೀಡಿದರು.
ನಂತರ ಮಾತನಾಡಿದ ಸುನಿಲ್ ಸುಬ್ರಮಣಿ , ಕಂಪ್ಯೂಟರ್ ಯುಗದಲ್ಲಿ ಎಲ್ಲರೂ ಹಣ ಮಾಡುವ ದಂಧೆಯಲ್ಲಿ ಮುಳುಗಿದ್ದಾರೆ. ಕ್ರೀಡೆಯ ಕಡೆ ಗಮನ ಹರಿಸುತ್ತಿಲ್ಲ. ನಾವು ಆರೋಗ್ಯವಾಗಿರಲು ಕ್ರೀಡೆ ಮುಖ್ಯವಾಗಿದೆ ಎಂದರು.
ಪಂದ್ಯಾಟದಲ್ಲಿ ಕೊಡಗು ಉಪನ್ಯಾಸಕರ ತಂಡ, ಕೊಡಗು ಶಿಕ್ಷಕರ ತಂಡ, ಕೊಡಗು ಪ್ರೆಸ್ ಪ್ರೆಸ್ ಕ್ಲಬ್ ತಂಡ, ಕೊಡಗು ವಿದ್ಯುತ್ ಇಲಾಖೆ ತಂಡ, ಕೊಡಗು ಪೊಲೀಸ್ ಇಲಾಖೆ ತಂಡ, ಕೊಡಗು ಇಂಜಿನಿಯರ್ಸ್ ತಂಡ, ಮುಳಿಯ ಜ್ಯುವೆಲ್ಲರ್ಸ್ ತಂಡ, ಲಿವಿಸ್ಟಾ ತಂಡ, ಕೊಡಗು ಬ್ಯಾಂಕರ್ಸ್ ತಂಡ, ಹಾಗೂ ಮಾಂಡೋವಿ ಮೋಟರ್ಸ್ ಸೇರಿದಂತೆ ಹತ್ತು ತಂಡಗಳು ಭಾಗವಹಿಸಿದ್ದವು.
ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಳಿಯ ಜ್ಯುವೆಲ್ಲರ್ಸ್ ಮಾರ್ಕೆಟಿಂಗ್ ವ್ಯವಸ್ಥಾಪಕ ಜಯಪ್ರಕಾಶ್, ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ರವಿಶಂಕರ್, ಕಿರಣ್ ಉಪನ್ಯಾಸಕ ಪ್ರದೀಪ್, ಪ್ರಭಾರ ಪ್ರಾಂಶುಪಾಲ ಜಗನ್ನಾಥ್, ಪ್ರಮುಖರಾದ ಪೆಮ್ಮಯ್ಯ ಹಾಗೂ ದೈಹಿಕ ಶಿಕ್ಷಕ ಪವನ್ ಇದ್ದರು.