ಕುಶಾಲನಗರ, ಫೆ. 16: ಇಲ್ಲಿನ ವಾಸವಿ ಯುವಜನ ಸಂಘದ ಆಶ್ರಯದಲ್ಲಿ 6ನೇ ವರ್ಷದ ರಂಗೋಲಿ ಸ್ಪರ್ಧೆ ನಡೆಯಿತು.

ರಥಬೀದಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ವಿ.ಪಿ. ನಾಗೇಶ್ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ 10 ಮಕ್ಕಳು ಸೇರಿದಂತೆ ಒಟ್ಟು 75 ಮಂದಿ ಪಾಲ್ಗೊಂಡಿದ್ದರು ಈ ಸಂದರ್ಭ ಪ್ರಮುಖರಾದ ಎಸ್.ಎನ್. ನರಸಿಂಹಮೂರ್ತಿ, ಬಿ.ಆರ್. ನಾಗೇಂದ್ರ ಪ್ರಸಾದ್, ನಾಗಪ್ರವೀಣ್, ಲಕ್ಮೀ ಹರೀಶ್, ಶೋಭಾ ಸತ್ಯ, ಮತ್ತಿತರರು ಇದ್ದರು.