ಕೂಡಿಗೆ, ಫೆ. 15: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು-ಜೇನುಕಲ್ಲುಬೆಟ್ಟ ವ್ಯಾಪ್ತಿಯ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಸಂದರ್ಭ ನಾಲ್ಕು ಗ್ರಾಮಗಳ ನೂರಾರು ರೈತರು ಕಳೆದ ಸಾಲಿನಲ್ಲಿ ಮಳೆಯ ಸಂದರ್ಭ ಜೇನುಕಲ್ಲು ಬೆಟ್ಟದಿಂದ ನೀರು ಬಂದು ಕಕ್ಕೆಹೊಳೆಯ ನಾಲೆಯ ಮೂಲಕ ಹರಿಯಬೇಕಿದ್ದ ನೀರು ನಾಲೆಯ ಹೂಳೆತ್ತದ ಪರಿಣಾಮ ಕೆಳಭಾಗದಲ್ಲಿನ ನೂರಾರು ಎಕರೆಯ ಬೆಳೆಗಳು ಕೊಚ್ಚಿಹೋಗಿದ್ದನ್ನು ಶಾಸಕರ ಗಮನಕ್ಕೆ ತಂದರು.

ರೈತರ ಮನವಿಗೆ ಸ್ಪಂದಿಸಿದ ಶಾಸಕರು ಸ್ಥಳ ವೀಕ್ಷಿಸಿ, ಕಕ್ಕೆಹೊಳೆ ಮುಖ್ಯನಾಲೆಯ ಹೂಳೆತ್ತಲು ಕ್ರಮಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಗಿರೀಶ್‍ಕುಮಾರ್, ಸದಸ್ಯರಾದ ರಾಮಚಂದ್ರ, ಕೆ.ವೈ. ರವಿ, ಮೋಹಿನಿ, ಜಯಶ್ರಿ, ಚಂದ್ರಿಕಾ, ಪುಷ್ಪ, ಮಂಜಯ್ಯ, ವಿಶ್ವನಾಥ್, ಸೀಗೆಹೊಸೂರು-ಜೇನುಕಲ್ಲು ಬೆಟ್ಟದ ರೈತ ಒಕ್ಕೂಟದ ಅಧ್ಯಕ್ಷ ಜವರಪ್ಪ, ಕಾರ್ಯದರ್ಶಿ ಮೋಹನ ಸೇರಿದಂತೆ ಈ ಭಾಗದ ನೂರಾರು ರೈತರು ಇದ್ದರು.