ಸೋಮವಾರಪೇಟೆ, ಫೆ. 15: ಮೈಸೂರಿನ ಕಲಾಧಾರೆ ಕಲ್ಚರಲ್ ಟ್ರಸ್ಟ್ ಹಾಗೂ ಖಾಸಗಿ ವಾಹಿನಿ ಯಾದ ಉದಯ ಕಾಮಿಡಿ ವತಿಯಿಂದ ಆಯೋಜಿಸಿದ್ದ ಟ್ರಸ್ಟ್ನ 20ನೇ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ ಸೋಮವಾರಪೇಟೆ ನಗರದ ಅಡ್ವೆಂಚರ್ಸ್ ಡ್ಯಾನ್ಸ್ ಸ್ಟುಡಿಯೋದ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನದೊಂದಿಗೆ ಕಲಾಧಾರೆ-2020 ಅವಾರ್ಡನ್ನು ತನ್ನದಾಗಿಸಿಕೊಂಡಿದೆ.
ಡ್ಯಾನ್ಸ್ ತಂಡದಲ್ಲಿ ಸೋಮವಾರಪೇಟೆ ನಗರದ ಚೇತನ್, ಅಶ್ವಿಜಾ ಸಂತೋಷ್ ರೈ, ಆರುಷಿ, ಮನಶ್ರೀ, ನಿಹಾರಿಕ, ಮೋನಿಷ, ನವೀನ್, ರಾಜೇಶ್, ನವೀನ್, ಅಖಿಲೇಶ್, ಪ್ರಜ್ವಲ್ ಭಾಗವಹಿಸಿದ್ದರು. ಈ ತಂಡ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ರಾಷ್ಟ್ರಮಟ್ಟದ ವಿಶ್ವ ಗೋಕಾಕ್ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.