ವೀರಾಜಪೇಟೆ, ಫೆ. 16: ವೀರಾಜಪೇಟೆ ನಗರದ ಡ್ಯೂಡ್ಸ್ ಕ್ರೀಡಾ ಸಂಸ್ಥೆ ಇತ್ತೀಚೆಗೆ ನಗರದಲ್ಲಿ ಹೊನಲು ಬೆಳಕಿನ ವೀರಾಜಪೇಟೆ ಪ್ರೀಮಿಯರ್ ಕಬಡ್ಡಿ ಲೀಗ್ ಪಂದ್ಯಾಟವನ್ನು ಆಯೋಜಿಸಿತ್ತು. ಪಂದ್ಯಾಟದಲ್ಲಿ ಉಳಿಕೆಯಾದ ಹಣದಲ್ಲಿ ಬೇಟೋಳಿ ಗ್ರಾ.ಪಂ. ವ್ಯಾಪ್ತಿಯ ಹೆಗ್ಗಳ ಗ್ರಾಮದಲ್ಲಿರುವ ಅನಾಥ ವೃದ್ಧಾಸೇವಾಶ್ರಮ ಸ್ನೇಹ ಭವನಕ್ಕೆ ಒಂದು ದಿನದ ಉಪಹಾರವನ್ನು ಒದಗಿಸಿದರು. ಈ ಸಂದರ್ಭ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಅಭಿಜಿತ್, ಸ್ನೇಹ ಭವನ್ ವ್ಯವಸ್ಥಾಪಕರಾದ ವೇಣು, ಮೇರಿ ಲೊಬೊ ಡ್ಯೂಡ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಲಕ್ಷ್ಮೀಶ್, ಕಾರ್ಯದರ್ಶಿ ಹೇಮಂತ್ ಸಹ ಕಾರ್ಯದರ್ಶಿ ಸಜೀನ್ ಮತ್ತು ಖಜಾಂಚಿ ವಿವೇಕ್ ಹಾಗೂ 15 ಮಂದಿ ಸದಸ್ಯರು ಹಾಜರಿದ್ದರು.