ಸೋಮವಾರಪೇಟೆ, ಫೆ. 14: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪ್ರಸಕ್ತ ಸಾಲಿನ “ಫ್ಯಾಕಲ್ಟಿ ಆಫ್ ಸಿವಿಲ್ ಇಂಜಿನಿಯರಿಂಗ್ ಸೈನ್ಸಸ್” ವಿಷಯದಲ್ಲಿ ಸೋಮವಾರಪೇಟೆ ಪಟ್ಟಣದ ನಿವಾಸಿ ಕೆ.ಪಿ. ಸಾಹುಲ್ ಹಮೀದ್ ಅವರು ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.

ಸೋಮವಾರಪೇಟೆಯ ಕೆ.ಪಿ. ಅಬ್ದುಲ್ ರಹ್ಮಾನ್ ಮತ್ತು ಬಿ. ಫಾತಿಮಾ ದಂಪತಿಯ ಪುತ್ರ ರಾಹುಲ್ ಹಮೀದ್ ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸೋಮವಾರಪೇಟೆಯ ಓ.ಎಲ್.ವಿ. ಕಾನ್ವೆಂಟ್, ಪ್ರೌಢಶಾಲೆಯನ್ನು ಸೆಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಪೂರೈಸಿದ್ದಾರೆ. ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ “ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್” ಮುಗಿಸಿ ಮೈಸೂರಿನ ಜೆ.ಸಿ.ಇ. ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಮುಂದೆ ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಸಾಹುಲ್ “ಎನ್ವಿರಾನ್ಮೆಂಟ್ ಇಂಜಿನಿಯರಿಂಗ್” ವಿಷಯದಲ್ಲಿ ಎಂಟೆಕ್ ಪದವಿ ಪೂರೈಸಿದ್ದಾರೆ. ಕಳೆದ 3 ವರ್ಷದಿಂದ ಪ್ರೊ. ಸದಾಶಿವ ಮೂರ್ತಿ ಬಿ.ಎಂ. ಇವರ ಮಾರ್ಗದರ್ಶನದಲ್ಲಿ “ಈಚಿಣe ಚಿಟಿಜ ಣಡಿಚಿಟಿsಠಿoಡಿಣ oಜಿ seಟeಛಿಣ ಗಿಔಅS ಖಿhಡಿough ಆiಜಿಜಿeಡಿeಟಿಣ sub-soiಟs ಚಿಟಿಜ gಡಿouಟಿಜ ತಿಚಿಣeಡಿ” ವಿಷಯದಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಥೀಸಿಸ್‍ಗೆ ಡಾಕ್ಟರೇಟ್ ಪದವಿ ಲಭಿಸಿದೆ. ಸಾಹುಲ್ ಹಮೀದ್ ಅವರು, ಜಿಲ್ಲೆಯಲ್ಲಿ ಎ.ಡಿ.ಎಲ್.ಆರ್. ಆಗಿ ಇದೀಗ ವರ್ಗಾವಣೆಗೊಂಡಿರುವ ಕೆ.ಪಿ. ಷಂಶುದ್ದೀನ್ ಅವರ ಸಹೋದರ.