ಗುಡ್ಡೆಹೊಸೂರು, ಫೆ. 14: ಇಲ್ಲಿನ ಸಿದ್ದಾಪುರ ರಸ್ತೆಯ ಸುಮಾರು 6 ಕಿ.ಮೀ. ರಸ್ತೆ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯ ಲತೀಫ್, ತಾ.ಪಂ. ಸದಸ್ಯೆ ಪುಷ್ಪ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಸ್. ಭಾರತಿ, ಪಿ.ಡಿ.ಒ. ಶ್ಯಾಂ, ಮತ್ತು ಸದಸ್ಯರಾದ ಪ್ರವೀಣ್, ನಾರಾಯಣ, ಭೀಮಯ್ಯ, ಕಾವೇರಪ್ಪ, ಪುಷ್ಪ, ಕವಿತಾ, ಡಾಟಿ, ಪಾರ್ವತಿ ಮುಂತಾದವರು ಹಾಜರಿದ್ದರು. ಇದೇ ವೇಳೆ ಬಾಳುಗೋಡು, ಬಸವನಹಳ್ಳಿ, ಸುಣ್ಣದಕೆರೆ, ಮಾದಪಟ್ಟಣ, ಬೊಳ್ಳುರು ಗ್ರಾಮದಲ್ಲಿ ತಲಾ ರೂ. 5 ಲಕ್ಷದ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.