ಮಡಿಕೇರಿ, ಫೆ.14: ವೈಲ್ಡ್ ಲೈಫ್ ಫಸ್ಟ್, ಸಂತ ಮೈಕಲರ ಪ್ರೌಢಶಾಲೆ ಮತ್ತು ಭಾರತೀಯ ವಿದ್ಯಾಭವನ್ ಕೊಡಗು ವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯಲ್ಲಿ ಕಾಡ್ಗಿಚ್ಚು ಜಾಗೃತಿ ಮೆರವಣಿಗೆ ಹಮ್ಮಿಕೊಳ್ಳ ಲಾಗಿತ್ತು. ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮುಂಭಾಗ ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್ ಜಾಥಾವನ್ನು ಉದ್ಘಾಟಿಸಿದರು.
ಕಾಡು ಮತ್ತು ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಕಾಡಿನ ಬೆಂಕಿ ಅನಾಹುತ ಮನುಕುಲವನ್ನು ವಿನಾಶದತ್ತ ಕೊಂಡೊಯ್ಯಲಿದೆ ಎಂದು ಹೇಳಿದರು.
ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ ಮಾತನಾಡಿ, ಕಾಡಿಗೆ ನಿರಂತರ ಬೆಂಕಿ ಬೀಳುವದರಿಂದ ವನ್ಯಜೀವಿಗಳ ನಾಶ, ಹಳ್ಳ ಕೊಳ್ಳಗಳೆಲ್ಲಾ ಬರಿದಾಗಿ ನೀರಿಗೆ ಹಾಹಾಕಾರ ಉಂಟಾಗಲಿದೆ. ಈ ನಿಟ್ಟಿನಲ್ಲಿ ಕಾಡ್ಗಿಚ್ಚು ಸಂಭವಿಸದಂತೆ ಎಲ್ಲರೂ ಎಚ್ವರವಹಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮ ಸಂಯೋಜಕ ಟಿ.ಎಲ್.ಶ್ರೀನಿವಾಸ್ ಸ್ವಾಗತಿಸಿದರು.
ಕಾಡ್ಗಿಚ್ಚು ಜಾಗೃತಿ ಮೆರವಣಿಗೆಯಲ್ಲಿ ತಮ್ಮು ಪೂವಯ್ಯ, ಮಂದಪಂಡ ಕೆ.ಅಪ್ಪಚ್ಚು (ಸತೀಶ್), ತೇಲಪಂಡ ಪ್ರಮೋದ್ ಸೋಮಯ್ಯ, ಸಂತ ಮೈಕಲರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ಎ.ಜಾನ್ ಸನ್, ಶಿಕ್ಷಕಿ ಜಾನಕಿ ಐ, ಕೊಡಗು ವಿದ್ಯಾಲಯದ ದೈಹಿಕ ಶಿಕ್ಷಕ ದಾಮೋದರ್, ನಗರ ಠಾಣಾ ಎಎಸ್ಐ ಮಹಮ್ಮದ್ ಅಕ್ಮಲ್, ಕೆ.ಪೊನ್ನಪ್ಪ, ಟ್ರಾಫಿಕ್ ಎಸ್ ಐ.ಬೆಳ್ಳಿಯಪ್ಪ, ಬಲ್ಲಚಂಡ ರಂಜನ್, ವಿ.ಟಿ.ಮದನ್, ಪದ್ಮನಾಭ, ಹೆಚ್.ಎಸ್. ಶ್ರೀನಿವಾಸ್, ಪ್ರದೀಪ್ ಮುಂತಾದವರು ಇದ್ದರು.
ಕೆ.ಎಂ. ಚಿಣ್ಣಪ್ಪ ಮತ್ತು ತಮ್ಮು ಪೂವಯ್ಯ ಅವರು ಕೊಡಗು ಪೊಲೀಸ್ ಅಧೀಕ್ಷಕಿ ಡಾ.ಸುಮನ್ ಡಿ.ಪಿ. ಅವರನ್ನು ಭೇಟಿ ಮಾಡಿ ‘‘ಕಾಡಿನೊಳಗೊಂದು ಜೀವ’’ ಪುಸ್ತಕ ನೀಡಿದರು.