ಮಡಿಕೇರಿ, ಫೆ. 14: ಗ್ರಾಮ ಲೆಕ್ಕಿಗರ ಹುದ್ದೆ ಹೊಂದಿಕೊಳ್ಳುವ ಸಂಬಂಧ ನಕಲಿ ಅಂಕಪಟ್ಟಿ ಸಲ್ಲಿಸಿದ್ದ ಈರ್ವರಿಗೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಸಜೆ ವಿಧಿಸಿ ತೀರ್ಪು ನೀಡಿದೆ.
2013ನೇ ಸಾಲಿನಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಯನ್ನು ಮೆರಿಟ್ ಆಧಾರದ ಮೇಲೆ ಭರ್ತಿ ಮಾಡುವ ಸಲುವಾಗಿ ಅಭ್ಯರ್ಥಿಗಳಿಂದ ದಾಖಲೆ ಪಡೆದುಕೊಂಡು ಅಂಕಪಟ್ಟಿಗಳ ಪರಿಶೀಲನೆಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಪ್ರಾಧಿಕಾರದವರು ಅಂಕಪಟ್ಟಿಗಳ ನೈಜತೆಯನ್ನು ಪರಿಶೀಲಿಸಿದಾಗ ಬೆಂಗಳೂರಿನ ದೇವನಹಳ್ಳಿಯ ಮುನಿಯಪ್ಪ ಅವರ ಪುತ್ರ ಶಿವರಾಜ್ ಮತ್ತು ಚಿಕ್ಕಬಳ್ಳಾಪುರದ ಕಚ್ಚಾ ನಾಯಕನಹಳ್ಳಿ ಗ್ರಾಮದ ಎಲ್.ಎ. ನರಸಿಂಹಪ್ಪ ಅವರ ಪುತ್ರ ಎನ್. ನಾಗೇಶ ಇವರು ಸರ್ಕಾರಿ ಹುದ್ದೆಯನ್ನು ಮೋಸದಿಂದ ಗಿಟ್ಟಿಸುವ ಸಲುವಾಗಿ ನಕಲಿ ಅಂಕಪಟ್ಟಿಯನ್ನು ಸಲ್ಲಿಸಿರುವ ಬಗ್ಗೆ ದೊರೆತ ಪುಕಾರಿನ ಮೇರೆಗೆ ಆರೋಪಿತರ ವಿರುದ್ಧ ಭಾ.ದಂ.ಸಂ.ಕಲಂ 465, 468, 471, 420 ಜೊತೆಗೆ 34 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ನಗರ ಠಾಣೆಯವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯು ಮತ್ತು ಚಿಕ್ಕಬಳ್ಳಾಪುರದ ಕಚ್ಚಾ ನಾಯಕನಹಳ್ಳಿ ಗ್ರಾಮದ ಎಲ್.ಎ. ನರಸಿಂಹಪ್ಪ ಅವರ ಪುತ್ರ ಎನ್. ನಾಗೇಶ ಇವರು ಸರ್ಕಾರಿ ಹುದ್ದೆಯನ್ನು ಮೋಸದಿಂದ ಗಿಟ್ಟಿಸುವ ಸಲುವಾಗಿ ನಕಲಿ ಅಂಕಪಟ್ಟಿಯನ್ನು ಸಲ್ಲಿಸಿರುವ ಬಗ್ಗೆ ದೊರೆತ ಪುಕಾರಿನ ಮೇರೆಗೆ ಆರೋಪಿತರ ವಿರುದ್ಧ ಭಾ.ದಂ.ಸಂ.ಕಲಂ 465, 468, 471, 420 ಜೊತೆಗೆ 34 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ನಗರ ಠಾಣೆಯವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯು