ಪಾಲಿಬೆಟ್ಟ, ಫೆ .14 : ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆ ಗ್ರಾಮದ ವಿವಿಧ ಭಾಗಗಳಿಗೆ ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು. ಚೆನ್ನಯ್ಯನಕೋಟೆ ಪೈಸಾರಿ, ದಯ್ಯದ ಹಡ್ಲು, ಕೆಸುವಿನಕೆರೆ, ದಿಡ್ಡಳ್ಳಿ, ಚೊಟ್ಟೆಪಾರೆ, ಬಸವನಹಳ್ಳಿ ಹಲವು ಭಾಗಗಳಲ್ಲಿ ಹಾಳಾದ ರಸ್ತೆಗಳಿಗೆ ಡಾಮರೀಕರಣ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಿಸಲು ಒಂದು ಕೋಟಿ ಎಪ್ಪತ್ತು ಲಕ್ಷ ಬಿಡುಗಡೆ ಮಾಡುವುದರೊಂದಿಗೆ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು ಉತ್ತಮ ರೀತಿಯ ಕಾಮಗಾರಿಯನ್ನು ಕೈಗೊಳ್ಳಬೇಕು ಅದೇರೀತಿಯಲ್ಲಿ ಗ್ರಾಮಸ್ಥರು ಕೂಡ ಸಹಕರಿಸಬೇಕೆಂದು ತಿಳಿಸಿದರು. ಪಾಲಿಬೆಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿಯವರು ಮಾತನಾಡಿ ಶಾಸಕರ ಅನುದಾನದಿಂದ ಹಲವು ರಸ್ತೆ ಕಾಮಗಾರಿ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನುಡಿದರು.

ಹನ್ನೆರಡು ಲಕ್ಷದಲ್ಲಿ ಆದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭ ಸ್ಥಳೀಯರಾದ ಅಪ್ಪಾಜಿ, ಗ್ರಾಮಪಂಚಾಯಿತಿ ಸದಸ್ಯೆ ಗಾಯತ್ರಿ, ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಇ.ಸಿ.ಜೀವನ್, ಗ್ರಾಮಪಂಚಾಯಿತಿ ಸದಸ್ಯ ಮೇಕೇರಿರ ಅರುಣ್, ಗುತ್ತಿಗೆದಾರ ವಿನ್ಸೆಂಟ್ ಮತ್ತಿತರರು ಇದ್ದರು.