ನಾಪೆÇೀಕ್ಲು, ಫೆ. 13: ನಾಪೆÇೀಕ್ಲು ಚೆಸ್ಕಾಂ ಕಚೇರಿಯಲ್ಲಿ ಇನ್ನು ಮುಂದೆ ವಾರದ ಎಲ್ಲಾ ದಿನಗಳಲ್ಲಿಯೂ ಕರೆಂಟ್ ಬಿಲ್ ಪಾವತಿಸಲು ವ್ಯವಸ್ಥೆ ಕೈಗೊಳ್ಳಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಸೆಸ್ಕ್‍ನ ನಾಪೆÇೀಕ್ಲು ಶಾಖೆಯಲ್ಲಿ ನೂತನ ಎಟಿಪಿ ಯಂತ್ರವನ್ನು ಅಳವಡಿಸಲಾಗಿದೆ. ಗ್ರಾಹಕರು ವಾರದ ಎಲ್ಲಾ ದಿನಗಳಲ್ಲಿ ತಮ್ಮ ವಿದ್ಯುತ್ ಬಿಲ್ಲನ್ನು ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ಪಾವತಿಸಿ ರಶೀದಿ ಪಡೆದುಕೊಳ್ಳಬಹುದು ಎಂದು ನಾಪೆÇೀಕ್ಲು ಶಾಖೆಯ ಕಿರಿಯ ಅಭಿಯಂತರ ಹೆಚ್.ಆರ್.ಹರೀಶ್ ತಿಳಿಸಿದ್ದಾರೆ.