ಕಡಂಗ, ಫೆ. 13: ಜಿಲ್ಲೆಯ ಪ್ರತಿಷ್ಠಿತ ಮತ ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆ ಅನ್ವರುಲ್ ಹುದಾದಲ್ಲಿ ವೀರಾಜಪೇಟೆ ಸೆಕ್ಟರ್ ಎಸ್.ಎಸ್.ಎಫ್. ಸಮಿತಿಯ ವಾರ್ಷಿಕ ಮಹಾ ಸಭೆಯನ್ನು ಸೆಕ್ಟರ್ ಅಧ್ಯಕ್ಷ ಇಸ್ಮಾಯಿಲ್ ಅಹಸನಿ ಕಡಂಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ವರದಿ ವಾಚನೆಯನ್ನು ಕಾರ್ಯದರ್ಶಿ ಶಾಹೀದ್ ನೆರವೇರಿಸಿದರು. ತರಗತಿಯನ್ನು ಜಿ. ರಾಜ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿಗಳಾದ ಮಹಮ್ಮದ್ ನಿಸಾರ್ ಸಖಾಫಿ, ಉಬೈದುಲ್ಲಾ ಗುಂಡಿಗೆರೆ, ಮುಜೀಬ್ ಕೊಂಡಂಗೆರಿ, ಜಿಲ್ಲಾ ನಾಯಕ ಜುನೈದ್ ಅಮ್ಮತ್ತಿ ಪಾಲ್ಗೊಂಡಿದ್ದರು. ಬಳಿಕ 2020-21 ಸಾಲಿನ ನೂತನ ಸೆಕ್ಟರ್ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸೈಫುದ್ದೀನ್ ಮುಸ್ಲಿಯಾರ್ ಕಂಡಗಾಲ, ಉಪಾಧ್ಯಕ್ಷರುಗಳಾಗಿ ಯೂಸಫ್ ಮುಸ್ಲಿಯಾರ್ ಚಿಟ್ಟಡೆ, ಶಿಯಬ್ ಜೌಅರಿ ಕೋಮ್ಮತೊಡ್, ಪ್ರಧಾನ ಕಾರ್ಯದರ್ಶಿ ಸಂಶಾದ್, ಕಾರ್ಯದರ್ಶಿ ಯೂಸಫ್ ಚಾಮಿಯಾಲ, ಸೀನಾನ್, ಕೋಶಾಧಿಕಾರಿ ನೌಷಾದ್ ಕಡಂಗ, ಕ್ಯಾಂಪಸ್ ಕಾರ್ಯದರ್ಶಿ ನಜೀಬ್ ಚಾಮಿಯಲ, ಸದಸ್ಯರುಗಳಾಗಿ ಇಸ್ಮಾಯಿಲ್ ಅಹಸನಿ ಕಡಂಗ, ನಿಜಾರ್ ಫಾಳ್ಳಿ ಶಮೀರ್ ಕಲ್ಲುಬಾಣೆ, ನೌಷಾದ್ ಚಿಟ್ಟಡೆ, ಉಸ್ಮಾನ್ ಕಡಂಗ, ಆಸಿಫ್ ಚಾಮಿಯಾಲ, ಉಬೈಸ್ ಗುಂಡಿಗೆರೆ, ಶಾಯಿದ್ ಕಡಂಗ, ಇರ್ಷಾದ್ ದೇವಣೆಗೆರೆ, ಸಿದ್ದಿಕ್, ಅಬ್ದುರಹ್ಮಾನ್.

-ನೌಫಲ್ ಕಡಂಗ